ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಶನಿವಾರ ಔಸಾದ ಸದ್ಗುರು ಗುರುಬಾಬಾ ಮಹಾರಾಜರ ಶ್ರೀ ನಾಥಷಷ್ಟಿ ಮಹೋತ್ಸವ ನಿಮಿತ್ತ ಕಾಶಿ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರ ಸಾನ್ನಿಧ್ಯದಲ್ಲಿ ಏರ್ಪಡಿಸಿದ್ದ ಧರ್ಮಸಭೆಯನ್ನು ಹಾರಕೂಡದ ಶ್ರೀ ಡಾ.ಚನ್ನವೀರ ಶಿವಾಚಾರ್ಯರು ಉದ್ಘಾಟಿಸಿದರು. ಶ್ರೀ ಗುರುಬಾಬಾ ಮಹಾರಾಜ, ಶ್ರೀ ಗಹಿನಿನಾಥ ಮಹಾರಾಜ ಇತರರಿದ್ದರು. 
ಜಿಲ್ಲೆ

ಭಕ್ತಿಯ ಬೆಸುಗೆ ಸಾಮರಸ್ಯಕ್ಕೆ ಸ್ಫೂರ್ತಿ

ಬಸವಕಲ್ಯಾಣ: ರಾಷ್ಟç ಹಾಗೂ ವಿಶ್ವ ಹಿಂದು ಸಮುದಾಯದ ಶ್ರದ್ಧಾ ಭಕ್ತಿ ಕೇಂದ್ರ, ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಶ್ರೀ ನಾಥಷಷ್ಟಿ ಮಹೋತ್ಸವ ಮೂಲಕ ಭಕ್ತಿಯ ಬೆಸುಗೆ ದೇಶವನ್ನು ಸೌಹಾರ್ದ ಮತ್ತು ಸಾಮರಸ್ಯ ಪಥದಲ್ಲಿ ಸಾಗುವಂತೆ ಸ್ಫೂö್ಪರ್ತಿ ತುಂಬಿದೆ ಎಂದು ಹಾರಕೂಡ ಸಂಸ್ಥಾನ ಹಿರೇಮಠದ ಪೀಠಾಧಿಪತಿ ಶ್ರೀ ಡಾ.ಚನ್ನವೀರ ಶಿವಾಚಾರ್ಯ ನುಡಿದರು.

ಮಹಾರಾಷ್ಟ್ರ ಔಸಾದ ಶ್ರೀ ಸದ್ಗುರು ಗುರುಬಾಬಾ ಮಹಾರಾಜರ ಶ್ರೀ ನಾಥಷಷ್ಟಿ ಮಹೋತ್ಸವ ನಿಮಿತ್ತ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಶನಿವಾರ ರಾತ್ರಿ ಆಯೋಜಿಸಿದ್ದ ಧರ್ಮಸಭೆ ಉದ್ಘಾಟಿಸಿದ ಶ್ರೀಗಳು, ಮನಸ್ಸು ಶುದ್ಧಗೊಳಿಸುವ ಶಕ್ತಿ ದೇವ ಸ್ಮರಣೆಗಿದೆ. ಸಂಸಾರದ ಜಂಜಾಟದಿಂದ ಮಲೀನವಾದ ಮನಸ್ಸನ್ನು ಶ್ರೀಹರಿಯ ಮಂತ್ರದಿಂದ ಪರಿಶುದ್ಧಗೊಳಿಸಬಹುದು ಎಂದರು.

ಸಂತರು, ಶರಣರು ಮಹಾಂತರನ್ನು ಕೂಡಿರುವ ಭಾರತ ಸ್ವತಃ ಬೆಳಕಾಗಿದ್ದು, ವಿಶ್ವ ಚೈತನ್ಯಕ್ಕೆ ಬೆಳಕು ನೀಡುವಂತಹ ಶ್ರೇಷ್ಠ ಮತ್ತು ಪವಿತ್ರ ಭೂಮಿಯಾಗಿದೆ. ದೇಶದ ವಿವಿಧ ಸ್ಥಳಗಳಲ್ಲಿ ಪ್ರತಿವರ್ಷ ನಾಥಷಷ್ಟಿ ಉತ್ಸವ ಮೂಲಕ ಗುರುಬಾಬಾ ಮಹಾರಾಜ ಕೈಗೊಳ್ಳುವ ಭವರೋಗ ನಿವಾರಣೆಯ ಶ್ರೇಷ್ಠ ಕಾರ್ಯದಿಂದ ಹರಿಕೃಪೆ ಹರಿದು ಬರುವಂತಾಗಿದೆ ಎಂದು ಹೇಳಿದರು.

ಮಹಾ ಯೋಗಿಗಳು, ದಿವ್ಯ ಜ್ಞಾನಿಗಳಾದ ಕಾಶಿ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರ ಸಾನ್ನಿಧ್ಯ ಸಮಾರಂಭದ ಘನತೆಯನ್ನು ನೂರ್ಮಡಿ ಹೆಚ್ಚಿಸಿದೆ. ದೇಶ ಬಾಂಧವರಿಗೆ ಶ್ರೀರಾಮಚಂದ್ರ ಮಂಗಳವನ್ನುಂಟು ಮಾಡಲಿ ಎಂದು ಹಾರೈಸಿದರು.

ಶ್ರೀ ಸದ್ಗುರು ಗುರುಬಾಬಾ ಮಹಾರಾಜ ಔಸಾ ಸ್ವಾಗತಿಸಿದರು. ಶ್ರೀ ಗಹಿನಿನಾಥ ಮಹಾರಾಜ ಔಸಾ, ಬಿ.ಕೆ. ಹಿರೇಮಠ, ಮಲ್ಲಿನಾಥ ಹಿರೇಮಠ ಇತರರಿದ್ದರು. ಕಾರ್ತಿಕ ಸ್ವಾಮಿ ಯಲದಗುಂಡಿ ಪ್ರಾರ್ಥನಾ ಗೀತೆ ಹಾಡಿದರು.