ಜಿಲ್ಲೆ

ಭಕ್ತಿ, ಶ್ರದ್ಧೆ ಮಧ್ಯೆ ಬೊಮ್ಮಯ್ಯ ರಥೋತ್ಸವ

ಹುಮನಾಬಾದ್: ಹಳ್ಳಿಖೇಡ (ಕೆ) ಗ್ರಾಮದಲ್ಲಿ ಸೋಮವಾರ ಸಂಜೆ ಜಿಟಿ, ಜಿಟಿ ಮಳೆಯ ಮಧ್ಯೆಯೇ ಶರಣ ಕಿನ್ನರಿ ಬೊಮ್ಮಯ್ಯನವರ ರಥೋತ್ಸವ ಅಪಾರ ಭಕ್ತ ಸಮೂಹದ ಮಧ್ಯೆ ಸಡಗರ ಸಂಭ್ರಮದಿAದ ಜರುಗಿತು. ಜಾತ್ರಾ ಮಹೋತ್ಸವ ನಿಮಿತ್ತ ದೇವಸ್ಥಾನದಲ್ಲಿ ಬೆಳಗ್ಗೆ ಮಹಾ ರುದ್ರಾಭಿಷೇಕ ಪೂಜೆ, ಭಜನೆ, ಮಧ್ಯಾಹ್ನ ದೇವಸ್ಥಾನದಿಂದ ರಥದ ವರೆಗೆ ಕುಂಭ ಹಾಗೂ ಪಲ್ಲಕ್ಕಿ ಮೆರವಣಿಗೆ ನಡೆಯಿತು.
ಶ್ರದ್ಧೆ, ಭಕ್ತಿಯೊಂದಿಗೆ ಸಂಗೀತ ವಾದ್ಯಮೇಳದೊಂದಿಗೆ ಭಕ್ತರ ಜೈ ಘೋಷಣೆಗಳ ಮಧ್ಯೆ ವೈಭವದ ರಥೋತ್ಸವ ಆರಂಭವಾಯಿತು. ರಥೋತ್ಸವ ಉದ್ದಕ್ಕೂ ಭಕ್ತರು ಬಾಳೆ ಹಣ್ಣುಗಳನ್ನು ಎಸೆದು ಹರಕೆ ತೀರಿಸಿ ರಥ ಎಳೆದರು. ಜಾತಿ ಭೇದವಿಲ್ಲದೆ ಬೀದರ್, ಗುಲ್ಬರ್ಗ ಜಿ¯್ಲೆಯ ವಿವಿಧ ಗ್ರಾಮಗಳ ಅಪಾರ ಭಕ್ತರು ಪಾಲ್ಗೊಂಡಿದ್ದರು. ಶ್ರೀ ಉದಯರಾಜಯೋಗೀಂದ್ರ ಸ್ವಾಮೀಜಿ ಸಾನ್ಯಿಧ್ಯದಲ್ಲಿ ನಡೆದ ರಥೋತ್ಸವದ ವೇಳೆ ದೇವಸ್ಥಾನದ ಗುಡ್ಡ ಸೇರಿ ಎಲ್ಲೆಡೆ ಭಕ್ತ ಸಮೂಹವೇ ಕಂಡು ಬಂದಿತ್ತು.