ಜಿಲ್ಲೆ

ಭಕ್ತಿ ಮೆಚ್ಚಿ ದರ್ಶನ ನೀಡಿದ್ದ ಮಲ್ಲಿಕಾರ್ಜುನ

ಸಿರಿಗೇರಿ: ಗ್ರಾಮದ ಆರಾಧ್ಯ ದೇವತೆಗಳಾದ ಶ್ರೀ ನಾಗನಾಥೇಶ್ವರ ಮತ್ತು ಸಿರಿಗೆರೆಮ್ಮ ದೇವಿ ರಥೋತ್ಸವ ಅಂಗವಾಗಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಪುರಾಣ ಪ್ರವಚನ ಕಾರ್ಯಕ್ರಮ ಆಯೋಜಿಸಲಾಗಿದ್ದು, ಬಸವರಾಜ ಶಾಸ್ತ್ರಿ ಹಿರೇಮಠ ಭಾನುವಾರ ಚಾಲನೆ ನೀಡಿದರು.

ಶ್ರೀಶೈಲ ಮಲ್ಲಿಕಾರ್ಜುನನ ಪರಮಶಿಷ್ಯೆಯಾದ ಶಿವಶರಣೆ ಹೇಮರಡ್ಡಿ ಮಲ್ಲಮ್ಮ, ಮಲ್ಲಿಕಾರ್ಜುನನ ಸನ್ನಿಧಿಯಲ್ಲಿ ಗೋವುಗಳನ್ನು ಮೇಯಿಸಿಕೊಂಡು ಚಿಕ್ಕ ಗುಡಿಸಿಲಿನಲ್ಲಿ ವಾಸವಿದ್ದಳು. ಮಲ್ಲಿಕಾರ್ಜುನನ ದರ್ಶನಕ್ಕಾಗಿ ಧ್ಯಾನಿಸುತ್ತಿದ್ದಾಗ ಅನೇಕ ಪವಾಡಗಳು ನಡೆದಿವೆ. ಮಲ್ಲಮ್ಮ ಭಕ್ತಿಗೆ ಮೆಚ್ಚಿ ಶ್ರೀಶೈಲ ಮಲ್ಲಿಕಾರ್ಜುನ ದರ್ಶನ ನೀಡಿದ್ದ ಎಂದು ಬಸವರಾಜ ಶಾಸ್ತ್ರಿ ಹಿರೇಮಠ ತಿಳಿಸಿದರು.

ಪುರಾಣ ವಾಚಕ ಎಸ್.ಆರ್.ಮಹಾಬಲೇಶ್ವರ ಗೌಡ, ತಬಲಾ ವಾದಕ ಬೈರಾಪುರ ಹನುಮಂತಗೌಡ, ಶಿಕ್ಷಕ ಟಿ.ಎಚ್ ಶೇಕ್ಷಾವಲಿ, ಬಸರಗೋಡು ಕರಿಯಪ್ಪ, ಲಿಂಗನಗೌಡ, ಮಹಾಲಿಂಗಯ್ಯ, ಗುರುಮೂರ್ತಿ, ಗುಡಟ್ಟಿ ನಾಗರಾಜ, ಗೊರವರ ಮಲ್ಲಯ್ಯ ಇತರರಿದ್ದರು.