ಗುತ್ತಲ: ಭಕ್ತರ ಸಂಕಷ್ಟಗಳು ದೂರವಾಗಿ ಅವರು ಸಂತಸ ಹಾಗೂ ನೆಮ್ಮದಿ ಜೀವನ ಸಾಗಿಸುವಂತಾಗಬೇಕು ಎಂದು ನೆಗಳೂರು ಸಂಸ್ಥಾನ ಹಿರೇಮಠದ ಶ್ರೀ ಗುರುಶಾಂತೇಶ್ವರ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನೆಗಳೂರ ಗ್ರಾಮದ ಶ್ರೀಮಠದ ಜಾತ್ರಾ ಮಹೋತ್ಸವ ನಿಮಿತ್ತ ಹಮ್ಮಿಕೊಂಡಿರುವ ‘ಭಕ್ತರ ಸಂಕಷ್ಟಗಳ ಭಿಕ್ಷೆ ಶ್ರೀಮಠದ ಅಭಯದ ರಕ್ಷೆ’ ಅಭಿಯಾನದ ಅಂಗವಾಗಿ ಪಾದಯಾತ್ರೆಯಲ್ಲಿ ಭಕ್ತರ ಮನೆಗೆ ತೆರಳಿ ಶ್ರೀಗಳು ಮಾತನಾಡಿದರು.
ಶ್ರೀಮಠದ ಜಾತ್ರಾ ಮಹೋತ್ಸವ ನಿಮಿತ್ತ ಐದು ವರ್ಷಗಳಿಗೊಮ್ಮೆ ಗ್ರಾಮಸ್ಥರ ಆಶಯದಂತೆ ಪ್ರತಿ ಮನೆಗೆ ತೆರಳಿ ಪಾದಪೂಜೆ ನೆರವೇರಿಸಿ ಜಾತ್ರಾ ಮಹೋತ್ಸವದ ಯಶಸ್ಸಿಗೆ ಸಹಕಾರ ನೀಡುವಂತೆ ಆದೇಶ ನೀಡುತ್ತ ಬಂದಿದ್ದೇವೆ. ಈ ವರ್ಷ ಭಕ್ತರ ಮನೆಗೆ ತೆರಳಿ ಅವರ ಸಂಕಷ್ಟಗಳನ್ನೇ ಭಿಕ್ಷೆಯ ರೂಪದಲ್ಲಿ ಪಡೆಯುತ್ತಿದ್ದೇವೆ. ಮಹಾಕುಂಭಮೇಳದಿಂದ ತಂದಿರುವ ಪವಿತ್ರ ಗಂಗಾಜಲ ನೀಡಲಾಗುತ್ತಿದೆ. ನಿತ್ಯ ಬೆಳಗ್ಗೆ 6 ಗಂಟೆಗೆ 30 ಮನೆಗಳಿಗೆ ಭೇಟಿ ನೀಡುತ್ತಿದ್ದೇವೆ ಎಂದರು.
ಜಾತ್ರಾ ಮಹೋತ್ಸವ ಸೇವಾ ಸಮಿತಿ ಪದಾಧಿಕಾರಿಗಳು, ಶ್ರೀಮಠದ ಪಾಠ ಶಾಲಾ ವಿದ್ಯಾರ್ಥಿಗಳು, ಗ್ರಾಮಸ್ಥರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಗ್ರಾಮದ ಜಾರ್ ಹನಸಿ ಎಂಬ ಮುಸ್ಲಿಂ ಕುಟುಂಬದ ಮನೆಗೆ ತೆರಳಿದ ಶ್ರೀಗಳು ಭಕ್ತರಿಂದ ಪಾದಪೂಜೆ ಸ್ವೀಕರಿಸಿ, ಆಶೀರ್ವದಿಸಿದರು.