ಜಿಲ್ಲೆ

ಭಕ್ತರಿಂದ ಹಾವಗಿಲಿಂಗೇಶ್ವರ ಶ್ರೀ ತೊಟ್ಟಿಲು

ಬೀದರ್: ಭಾಲ್ಕಿ ತಾಲ್ಲೂಕಿನ ಶಿವಣಿ ಹಾಗೂ ಹಲಬರ್ಗಾ ಗ್ರಾಮದಲ್ಲಿ ಹಾವಗಿಲಿಂಗೇಶ್ವರ ಶಿವಾಚಾರ್ಯರ 37ನೇ ಜನ್ಮದಿನವನ್ನು ಭಕ್ತರು ಸಡಗರ, ಸಂಭ್ರಮದಿಂದ ಆಚರಿಸಿದರು.
ಪಾದಪೂಜೆ, ತೊಟ್ಟಿಲು, ಸನ್ಮಾನ, ಅನ್ನ ದಾಸೋಹದ ಮೂಲಕ ಶ್ರೀಗಳಿಗೆ ಗೌರವ ಸಮರ್ಪಿಸಿದರು. ಜಿಲ್ಲೆಯ ಧಾರ್ಮಿಕ ಕ್ಷೇತ್ರಕ್ಕೆ ಶ್ರೀಗಳ ಕೊಡುಗೆಯನ್ನು ಸ್ಮರಿಸಿದರು.
ಹಲಬರ್ಗಾ ಗ್ರಾಮದ ರಾಚೋಟೇಶ್ವರ ಸಂಸ್ಥಾನ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಭಾಲ್ಕಿ ತಾಲ್ಲೂಕು ಘಟಕದ ಅಧ್ಯಕ್ಷ ಗಣೇಶ ಪಾಟೀಲ ಜ್ಯಾಂತಿ ಅವರು ಶ್ರೀಗಳನ್ನು ಸನ್ಮಾನಿಸಿದರು. ಸುದೀಪ್ ತೂಗಾವೆ, ಸಚಿನ್ ಪಾಟೀಲ, ಮಹೇಶ ಪಾಟೀಲ, ಶಿವಕುಮಾರ ಪಾಟೀಲ ತೇಗಂಪುರ, ಮಂಜುನಾಥ ಪಾಟೀಲ, ದತ್ತು ಪಾಟೀಲ, ನಾಗೇಶ ಪಾಟೀಲ, ರಮೇಶ ಪಂಚಾಳ, ಅನಿಲ್ ಬಿಲಗುಂದೆ, ಶಿವಕುಮಾರ ಬೇನಚಿಂಚೋಳಿ, ರಾಜು ಕುಂಬಾರ, ವಿಜಯಕುಮಾರ ಪಾಂಚಾಳ, ಪ್ರೇಮ ಪ್ರಭಾ ಮತ್ತಿತರರು ಪಾಲ್ಗೊಂಡಿದ್ದರು.
ಶಿವಣಿ ಮಠದಲ್ಲಿ ನಡೆದ ತೊಟ್ಟಿಲು ಕಾರ್ಯಕ್ರಮದಲ್ಲಿ ವೇದಮೂರ್ತಿ ಚಂದ್ರಕಾಂತ ಸ್ವಾಮಿ, ಅಶೋಕ ನೀಲಾ, ಶ್ರೀನಿವಾಸ ಬಿರಾದಾರ, ಬಸವರಾಜ ಪಾರಶೆಟ್ಟೆ, ಇಂದ್ರಜೀತ್ ಬಿರಾದಾರ, ಬಾಬು ಬೇಲೂರೆ, ಬಸವರಾಜ ಸ್ವಾಮಿ ಇದ್ದರು.