ಕೋಲಾರ: ಆರೂವರೆ ವರ್ಷಗಳಿಂದ ಯಾವುದೇ ಹಗರಣಗಳಿಗೆ ಆಸ್ಪದ ನೀಡದೆ ಮುಕ್ತವಾಗಿ ಆಡಳಿತ ನಡೆಸಲಾಗುತ್ತಿದೆ, ಮುಂದೆಯೂ ಕಪ್ಪುಚುಕ್ಕೆ ಇಲ್ಲದಂತೆ ಬ್ಯಾಂಕಿನ ಹಣಕಾಸಿನ ವ್ಯವಹಾರ ನಡೆಸಲು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಡಿಸಿಸಿ ಬ್ಯಾಂಕ್ ಶಾಖೆಗಳ ವ್ಯವಸ್ಥಾಪಕರು ಮತ್ತು ಮೇಲ್ವಿಚಾರಕರು ಬದ್ಧತೆಯಿಂದ ಕೆಲಸ ನಿರ್ವಹಿಸಬೇಕು ಎಂದು ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಸೂಚಿಸಿದರು.
ನಗರದ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಭಾನುವಾರ ಎರಡೂ ಜಿಲ್ಲೆಯ ಡಿಸಿಸಿ ಬ್ಯಾಂಕ್‌ಗಳ ವ್ಯವಸ್ಥಾಪಕರು ಮತ್ತು ಮೇಲ್ವಿಚಾರಕರೊಂದಿಗೆ ತುರ್ತು ಸಭೆ ನಡೆಸಿ, ಬ್ಯಾಂಕಿನ ಪ್ರಗತಿ ಸಹಿಸದೆ ಕೆಲವರು ಇಲ್ಲಸಲ್ಲದ ಆರೋಪ ವಾಡುತ್ತಿದ್ದಾರೆ, ನಾವು ಪ್ರಾವಾಣಿಕರಾಗಿದ್ದರೆ ಬ್ಲಾಕ್‌ಮೇಲ್‌ಗೆ ಹೆದರಬೇಕಿಲ್ಲ ಎಂದರು.
ಬ್ಯಾಂಕಿನ ಆಡಳಿತ ಉತ್ತಮವಾಗಿ ನಡೆಯುತ್ತಿದೆ ಎಂಬುದನ್ನು ಸಾಬೀತು ಪಡಿಸಲು ಬ್ಯಾಂಕ್ ವ್ಯಾಪ್ತಿಯ ಸೊಸೈಟಿಗಳ ಆಡಿಟ್ ವರದಿ ಸರಿ ಇರಬೇಕು, ಯಾರೇ ಪ್ರಶ್ನೆ ವಾಡಿದರು ದಾಖಲೆ ಮೂಲಕ ಉತ್ತರ ನೀಡುವಂತಿರಬೇಕು, ಜೂ.30ರೊಳಗೆ ಸೊಸೈಟಿಗಳ ಆಡಿಟ್ ಮತ್ತು ಆನ್‌ಲೈನ್ ಕೆಲಸ ಮುಗಿಸಿ ಲೆಕ್ಕಪತ್ರಗಳ ನಿರ್ವಹಣೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು ಎಂದು ಗಡುವು ನೀಡಿದರು.
ಬ್ಯಾಂಕಿನ ವ್ಯವಹಾರಗಳು ಸರಿಯಿದ್ದರೆ ನಾವು ಯಾರಿಗೂ ಭಯ ಪಡಬೇಕಿಲ್ಲ. ಒಂದು ವೇಳೆ ದಾಖಲೆ ನಿರ್ವಹಣೆಯಲ್ಲಿ ಲೋಪವಾದರೆ ಆಯಾ ಶಾಖೆಗಳ ವ್ಯವಸ್ಥಾಪಕರು ಮತ್ತು ಮೇಲ್ವಿಚಾರಕರೇ ಹೊಣೆಯಾಗಬೇಕು. ನಿಮ್ಮಿಂದ ನಾವು ತಲೆ ತಗ್ಗಿಸುವಂತಾಗಬಾರದು ಎಂದು ಎಚ್ಚರಿಸಿದರು.
ರೈತರಿಗೆ, ಮಹಿಳೆಯರಿಗೆ ಸಾಲ ಮಂಜೂರು ವಾಡುವಾಗ ಮುಲಾಜಿಗೆ ಒಳಗಾಗದೆ ಕೇಂದ್ರ ಕಚೇರಿ ವಾರ್ಗಸೂಚಿಯಂತೆ ಕಾರ್ಯ ನಿರ್ವಹಿಸಬೇಕು, ಸೂಕ್ತ ದಾಖಲೆಗಳಿಲ್ಲದೆ ಸಾಲ ಮಂಜೂರು ವಾಡಬೇಡಿ ಎಂದು ತಾಕೀತು ವಾಡಿದರು.
ಬ್ಯಾಂಕಿನ ದಾಖಲೆಗಳನ್ನು ನಬಾರ್ಡ್ ಅಥವಾ ಅಪೆಕ್ಸ್ ಬ್ಯಾಂಕ್ ಅಧಿಕಾರಿಗಳು ಯಾರೇ ಬಂದು ಪರಿಶೀಲನೆ ನಡೆಸಿದರೂ, ಧೈರ್ಯವಾಗಿ ಕಡತ ಮಂಡಿಸಬೇಕು, ನಿಮ್ಮ ಬೇಜಾಬ್ದಾರಿಯಿಂದ ಆಡಳಿತ ಮಂಡಳಿಗೆ ಕೆಟ್ಟ ಹೆಸರು ಬಂದರೆ ಸಹಿಸಲ್ಲ. ರೈತರು ಮತ್ತು ಮಹಿಳೆಯರ ಹಣದಲ್ಲಿ ಸಂಬಳ ಪಡೆಯುವ ಸಿಬ್ಬಂದಿಯಲ್ಲಿ ಬ್ಯಾಂಕಿನ ಬಗ್ಗೆ ಬದ್ಧತೆ ಇರದಿದ್ದರೆ ಜನರ ಶಾಪ ತಟ್ಟುತ್ತದೆ ಎಂದರು.
ಡಿಸಿಸಿ ಬ್ಯಾಂಕಿನಿಂದ ಸಾಲ ಪಡೆಯಲು ಶ್ರೀಮಂತರು ಬರುತ್ತಾರೆ. ಆದರೆ ಠೇವಣಿ ಇಡಲು ಮನಸ್ಸು ವಾಡುತ್ತಿಲ್ಲ, ಬ್ಯಾಂಕಿನಿಂದ ರೈತರು ಮತ್ತು ಮಹಿಳೆಯರಿಗೆ 1200 ಕೋಟಿ ರೂ. ಸಾಲ ನೀಡಲಾಗಿದ್ದು ಪ್ರಸ್ತುತ ಬಡವರು ಉಳಿತಾಯದಲ್ಲಿ 250 ಕೋಟಿ ರೂ. ಠೇವಣಿ ಇಟ್ಟಿರುವುದು ಹೆಮ್ಮೆಯ ವಿಷಯ ಎಂದರು.
ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ರವಿ, ಎಜಿಎಂಗಳಾದ ಬೈರೇಗೌಡ, ಖಲೀಂಮುಲ್ಲಾ, ನಾಗೇಶ್, ಚೌಡಪ್ಪ, ವ್ಯವಸ್ಥಾಪಕರಾದ ಹುಸೇನ್ ದೊಡ್ಡಮನಿ, ಅಂಬರೀಷ್, ಭಾನುಪ್ರಕಾಶ್, ಜ್ಯೋತಿ, ಆನಂದ್, ಅಸ್ಲಾಂ, ಚೆಲುವರಾಜು, ಚಂದ್ರಶೇಖರ್, ಮಂಜುನಾಥ್, ತನಿಖಾ ತಂಡದ ಅರುಣ್, ವಿನಯ್‌ಪ್ರಸಾದ್ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.
ಎಟಿಎಂ ಕಾರ್ಡ್ ವಿತರಣೆಗೆ ಕ್ರಮ: ರೈತರು ಮತ್ತು ಮಹಿಳೆಯರು ಬ್ಯಾಂಕಿನಿಂದ ಹಣ ಪಡೆಯಲು ಎಟಿಎಂ ಕಾರ್ಡ್ ವಿತರಣೆಯಾದರೆ ಭ್ರಷ್ಟಾಚಾರಕ್ಕೆ ಅವಕಾಶವಿರುವುದಿಲ್ಲ. ಈಗ ವಿತರಣೆ ವಾಡಿರುವ ಕಾರ್ಡ್‌ಗಳೊಂದಿಗೆ ಬೇಡಿಕೆಗೆ ಅನುಸಾರವಾಗಿ ಪ್ರತಿ ಶಾಖೆಗೆ 5 ಸಾವಿರ ಕಾರ್ಡ್ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು. ಗೋಲ್ಡ್‌ಲೋನ್ ಮಿತಿ ಹೆಚ್ಚಳ ಕುರಿತು ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಗೋವಿಂದಗೌಡ ಹೇಳಿದರು.