ಜಿಲ್ಲೆ

ಬ್ರಿಟಿಷರಿಂದ ಭಾರತವನ್ನು ಮುಕ್ತಿಗೊಳಿಸಿದ ಮಹಾನ್ ನಾಯಕ

ಚಿತ್ರದುರ್ಗ: ಅಹಿಂಸೆ,ಸತ್ಯದ ಹಾದಿಯಲ್ಲಿ ಬ್ರಿಟಿಷರ ಕಪಿಮುಷ್ಠಿಯಿಂದ ಭಾರತವನ್ನು ಮುಕ್ತಿಗೊಳಿಸಿದ ಮಹಾನ್ ನಾಯಕ ಮಹಾತ್ಮಗಾಂಧೀಜಿ ಸೇರಿದಂತೆ ಎಲ್ಲ ಸ್ವಾತಂತ್ರೃಹೋರಾಟಗಾರರ ಸ್ಮರಣೆ ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು. ಚಿತ್ರ ದುರ್ಗ ತಾಲೂಕಿನ ಸೀಬಾರದಲ್ಲಿ ಗುರುವಾರ ಆಯೋಜಿಸಿದ್ದ ಗಾಂಧೀಜಿ,ಮಾಜಿ ಪ್ರಧಾನಿ ಲಾಲ್‌ಬಹದ್ದೂರ್ ಶಾಸ್ತ್ರೀಜಿ ಅವರ ಜಯಂತ್ಯು ತ್ಸವದಲ್ಲಿ ಮಾತನಾಡಿ,ಬಹುದೊಡ್ಡ ರಾಷ್ಟ ಭಾರತ ಆಂಗ್ಲರ ಸಂಕೋಲೆಗೆ ಸಿಲುಕಿ ನರಳುತ್ತಿದ್ದ ಸಂದರ್ಭ ಸ್ವಾತಂತ್ರೃಚಳವಳಿಯ ನೇತೃತ್ವ ವಹಿಸಿ ಕೊಂಡು ಗಾಂಧೀಜಿ ರಕ್ತರಹಿತ ಕ್ರಾಂತಿಗೆ ಮುನ್ನುಡಿ ಬರೆದು,ಯಶಸ್ಸನ್ನೂ ಸಾಧಿಸಿದರು, ಆಮೂಲಕ ವಿಶ್ವಕ್ಕೆ ಮಾದರಿ ಆದರು.ಅಸ್ಪೃಶ್ಯತೆ ವಿರುದ್ಧ ಅಭಿಯಾನ,ಪಾದಯಾತ್ರೆ ನಡೆಸಿ ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ನೊಂದ ಜನರು ಮುಖ್ಯವಾಹಿನಿಗೆ ಬರುವ ರೀತಿ ಕಾರ‌್ಯ ನಿರ್ವಹಿಸಿ ದರು.

ಜಾತಿಯಿಂದ ಯಾರೊಬ್ಬರೂ ಅವಮಾನಿತರಾಗಬಾರದೆಂದು ಅಸ್ಪೃಶ್ಯತೆಯಿಂದ ನೋವುಣ್ಣುತ್ತಿದ್ದ ಜನರನ್ನು ಹರಿಜನರೆಂದು ಕರೆದು ಜನರ ಮನಸ್ಸಿನಿಂದ ಅಸ್ಪೃಶ್ಯತೆ ದೂರಗೊಳಿಸಲು ಮುಂದಾದ ಕಾರ‌್ಯ ಸ್ಮರಣೀಯ. ದಲಿತರ ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಬೇಕೆಂಬ ಆಶಯ ದೊಂದಿಗೆ ತಾವು ಕಾಲಿಟ್ಟ ಕಡೆಗಳಲ್ಲಿ ಹರಿಜನ ವಿದ್ಯಾರ್ಥಿ ನಿಲಯಗಳ ಸ್ಥಾಪಿಸಿದ್ದು, ದಲಿತರಲ್ಲಿ ಶೈಕ್ಷಣಿಕ ಕ್ರಾಂತಿಗೆ ನಾಂದಿ ಹಾಡಿತು ಎಂದರು. ಪಕ್ಷದ ಎಸ್‌ಸಿ ಘಟಕದ ತಾಲೂಕಾಧ್ಯಕ್ಷ ಅನಿಲ್ಕೋಟಿ,ಬ್ಲಾಕ್ ಯುವ ಕಾಂಗ್ರೆಸ್‌ಅಧ್ಯಕ್ಷ ಚೇತನ್‌ಬೋರೇನಹಳ್ಳಿ,ಗಂಗಾಧರ,ಮಣಿ,ಪಾಂಡು ರಂಗಪ್ಪ ಚಿಕ್ಕಾಲಘಟ್ಟ,ಇಂಗಳದಾಳ್‌ರಘು ಇತರರಿದ್ದರು.