ಮಂಜುನಾಥ (ಕೊಲೆಯಾದ ಯುವಕ) 
ಜಿಲ್ಲೆ

ಬ್ಯಾನರ್ ಜಗಳ ಕೊಲೆಯಲ್ಲಿ ಮುಕ್ತಾಯ !

ಬಾಗಲಕೋಟೆ: ಗ್ರಾಮದಲ್ಲಿ ನಡೆಯುತ್ತಿದ್ದ ಜಾತ್ರೆ ಅಂಗವಾಗಿ ಗೆಳೆಯರ -ೆÇÃಟೋಗಳ ಜೊತೆ ತನ್ನ ಭಾವಚಿತ್ರ ಹಾಕಿಸಿದ್ದ ಬ್ಯಾನರ್ ಮತ್ತೊಂದು ಗುಂಪು ಹರಿದು ಹಾಕಿದೆ ಎನ್ನುವ ಪ್ರಕರಣ ವಿಕೋಪಕ್ಕೆ ತಿರುಗಿ ಕೊನೆಗೆ ಕೊಲೆಯಲ್ಲಿ ಮುಕ್ತಾಯವಾಗಿರುವ ಘಟನೆ ಜಿಲ್ಲೆಯ ಮುಧೋಳ ತಾಲೂಕಿನ ಮಾಲಾಪುರ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ.

ಮಂಜುನಾಥ ಶೀಲವಂತ(೧೯) ಕೊಲೆಯಾಗಿರುವ ಯುವಕ. ಇತನನ್ನು ಕಲವರು ಸೇರಿಕೊಂಡು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಕೊಲೆಯಾದ ವ್ಯಕ್ತಿ ಮುಧೋಳ ನಗರ ನಿವಾಸಿಯಾಗಿದ್ದು, ಮಾಲಾಪುರ ಗ್ರಾಮ ವ್ಯಾಪ್ತಿಯಲ್ಲಿ ಆತನ ಜಮೀನು ಇದ್ದು, ಅಲ್ಲಿ ಹೋಗಿ ಬರುತ್ತಿದ್ದ. ಈ ವೇಳೆ ಹಲ್ಲೆ ಮಾಡಿದವರು ಜೊತೆಗೂ ಆತನ ಸ್ನೇಹ ಬೆಳೆದಿತ್ತು ಎನ್ನಲಾಗಿದೆ.

ಮಾಲಾಪುರ ಗ್ರಾಮದಲ್ಲಿ ಲಕ್ಕವ್ವ ಹಾಗೂ ದುರ್ಗಾದೇವಿ ಜಾತ್ರೆ ಮತ್ತು ಮಾರುತೇಶ್ವರ ಓಕುಳಿ ಸಂಭ್ರಮ ಇತ್ತು. ಇದರಿಂದ ಊರಲ್ಲಿ ಸಾಕಷ್ಟು ಯುವಕರು ಸ್ವಾಗತ ಕೋರಿ ಬ್ಯಾನರ್‌ಗಳನ್ನು ಮಾಡಿಸಿ ಹಾಕಿದ್ದರು. ಅದರಂತೆ ಮಂಜುನಾಥ ಶೀಲವಂತ ಎನ್ನುವ ಯುವಕ ಸಹ ತನ್ನ ಸ್ನೇಹಿತರ ಜೊತೆಗೆ ತನ್ನ ಭಾವಚಿತ್ರವನ್ನು ಸೇರಿಸಿ ಬ್ಯಾನರ್ ಮಾಡಿಸಿ ಹಾಕಿದ್ದರು. ಆದರೆ, ಈ ಬ್ಯಾನರ್‌ನ್ನು ಅನೀಲ ಮಾಂಗ್, ಆಕಾಶ್ ಮಾಂಗ್, ಪ್ರವೀಣ ಮಾಂಗ್ ಹಾಗೂ ಇತರರು ಸೇರಿ ಹರಿದು ಹಾಕಿದ್ದರು ಎನ್ನಲಾಗುತ್ತಿದೆ.

ಬ್ಯಾನರ್ ಹರಿದು ಹಾಕಿದ್ದಾರೆಂದು ಗೊತ್ತಾಗಿ ಮಂಜುನಾಥ ಕೈಯಲ್ಲಿ ಗನ್ ಹಿಡಿದ ಭಂಗಿಯಲ್ಲಿ ಕೂತು ಅವಾಚ್ಯ ಶಬ್ದಗಳ ಬಳಕೆ ಮಾಡಿ ಸ್ಟೇಟಸ್ ಹಾಕಿ, ಸವಾಲ್ ಹಾಕಿದ್ದನಂತೆ. ಇದು ಜಗಳ ಆರಂಭವಾಗಲು ಕಾರಣವಾಗಿದೆ. ಜಗಳ ತಾರಕಕ್ಕೇರಿ ಕೊನೆಗೆ ಚಾಕು ಇರಿದು ಕೊಲೆ ಮಾಡಲಾಗಿದೆ. ಪ್ರಕರಣಕ್ಕೆ ಸಂಬAಽಸಿದAತೆ ಮುಧೋಳ ಪೊಲೀಸ್ ಠಾಣೆಯಲ್ಲಿ ಹತ್ತು ಜನರ ವಿರುದ್ಧ ಎ-ï‌ಐಆರ್ ಆಗಿದ್ದು, ಐದಾರು ಜನರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಮೇಲ್ನೋಟಕ್ಕೆ ಇದು ಬ್ಯಾನರ್ ಹರಿದು ಹಾಕಿದ ಘಟನೆ ದ್ವೇಷದಿಂದ ಉಂಟಾದ ಜಗಳ ಎನ್ನಲಾಗುತ್ತಿದೆಯಾದರೂ ತೆರೆಯ ಹಿಂದೆ ದ್ವೇಷಕ್ಕೆ ಬೇರೆ ಕಾರಣ ಇತ್ತು ಎನ್ನಲಾಗುತ್ತಿದೆ. ಕೊಲೆ ಆರೋಪಿಗಳ ಪೈಕಿ ಒಬ್ಬರ ಕಡೆಯ ಯುವತಿ -ÉÇÃನ್‌ನಲ್ಲಿ ಮಂಜುನಾಥನ ಜೊತೆ ಮಾತನಾಡುತ್ತಿದ್ದನಂತೆ. ಇದೇ ವಿಚಾರಕ್ಕೆ ಮನಸ್ತಾಪ ಆಗಿತ್ತಂತೆ. ವಿಚಾರ ಗೊತ್ತಾಗಿ ಮಂಜುನಾಥನಿಗೆ -ÉÇÃನ್‌ನಲ್ಲಿ ಮಾತನಾಡದಂತೆ ಎಚ್ಚರಿಕೆ ಕೊಟ್ಟಿದ್ದರಂತೆ. ಆ ದ್ವೇಷ ಬ್ಯಾನರ್ ನೆಪದಲ್ಲಿ ತಾರಕಕ್ಕೆ ಹೋಗಿ ಕೊಲೆ ನಡೆದಿದೆ.

ಆರೋಪಿಗಳು ಸೇರಿಕೊಂಡು ಮಂಜುನಾಥನ ಮೇಲೆ ಹಲ್ಲೆ ನಡೆಸುತ್ತಿದ್ದ ವೇಳೆ ಮಂಜುನಾಥನ ಗೆಳೆಯನೊಬ್ಬ ಜಗಳ ಬಿಡಿಸಲು ಹೋದಾಗ ಆತನ ಮೇಲೂ ಹಲ್ಲೆ ಮಾಡಿದ್ದಾರೆ. ಗಾಯಗೊಂಡಿರುವ ಆ ಯುವಕ ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾನೆ. ಆದರೆ, ಅಲ್ಲಿ ಜಗಳ ಯಾವ ಕಾರಣಕ್ಕೆ ನಡೆಯುತ್ತಿತ್ತು ಎಂದು ತನಗೆ ಗೊತ್ತಿಲ್ಲ. ಜಾತ್ರೆಗೆ ಹೋಗಿದ್ದ ವೇಳೆ ಕೆಲವರು ಅವನ ಮೇಲೆ ಹಲ್ಲೆ ನಡೆಸುತ್ತಿರುವಾಗಿ ಬಿಡಿಸಲು ಹೋಗಿದ್ದೆ. ಆಗ ಅವರೆಲ್ಲ ನನಗೂ ಹೊಡೆದರು, ಅದು ಯಾಕೆ, ಏನು ಎಂದು ಗೊತ್ತಿಲ್ಲ ಎಂದು ತಿಳಿಸಿದ್ದಾನಂತೆ.