ಜಿಲ್ಲೆ

ಬ್ಯಾಡಗೊಟ್ಟ ಸಂಜೀವಿನಿ ಸ್ತ್ರೀಶಕ್ತಿ ಒಕ್ಕೂಟದಿಂದ ಕ್ರೀಡಾಕೂಟ

ಶನಿವಾರಸಂತೆ: ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಸಮೀಪದ ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಜೀವಿನಿ ಸ್ತ್ರೀ ಶಕ್ತಿ ಒಕ್ಕೂಟದ ವತಿಯಿಂದ ಬ್ಯಾಡಗೊಟ್ಟ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆಟದ ಮೈದಾನದಲ್ಲಿ ಇತ್ತೀಚೆಗೆ ಮಹಿಳೆಯರು, ಪುರುಷರು ಹಾಗೂ ಅಂಗನವಾಡಿ ಮಕ್ಕಳಿಗೆ ವಿವಿಧ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು.

ಕ್ರೀಡಾಕೂಟವನ್ನು ಬ್ಯಾಡಗೊಟ್ಟ ಗ್ರಾಪಂ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಸರೋಜಮ್ಮ ಉದ್ಘಾಟಿಸಿ ಶುಭ ಹಾರೈಸಿದರು.

ಒಕ್ಕೂಟದ ಅಧ್ಯಕ್ಷೆ ಸರೋಜಮ್ಮ, ಕಾರ್ಯದರ್ಶಿ ಕಮಲಾ ಸೇರಿದಂತೆ ಕೃಷಿ ಪ್ರಶಸ್ತಿ ವಿಜೇತ ಕೆ.ಜಿ.ಶಿವಕುಮಾರ್ ಮತ್ತು ಒಕ್ಕೂಟದ ಪ್ರಗತಿಗೆ ಸಹಕಾರ ನೀಡುತ್ತಿರುವ ಧರ್ಮಪ್ಪ ಅವರನ್ನು ಒಕ್ಕೂಟದ ವತಿಯಿಂದ ಸನ್ಮಾನಿಸಲಾಯಿತು.

ಗ್ರಾಪಂ ಅಧ್ಯಕ್ಷೆ ರೇಣುಕಾ ಮೇದಪ್ಪ, ಸದಸ್ಯರಾದ ಎಂ.ಎಚ್.ಮಹಮದ್ ಹನೀಫ್, ವಿನೋದ ಆನಂದ್, ಗ್ರಾಪಂ ಸಿಬ್ಬಂದಿ ಸಚಿನ್, ನಂದೀಶ್, ಒಕ್ಕೂಟದ ಎಂಬಿಕೆ ಶ್ವೇತಾ, ಎಲ್‌ಸಿಆರ್‌ಪಿ ಹರಿಣಾಕ್ಷಿ, ಕೃಷಿ ಸಖಿ ಜ್ಯೋತಿ, ಪಶುಸಖಿ ಎಸ್.ಕೆ.ಶ್ವೇತಾ ಸಂಘದ ಸದಸ್ಯರು ಹಾಗೂ ಕೊಡ್ಲಿಪೇಟೆ ಗ್ರಾಪಂ ಒಕ್ಕೂಟದ ಎಂಬಿಕೆ, ಎಲ್‌ಸಿಆರ್‌ಪಿ, ಕೃಷಿಸಖಿ, ಸದಸ್ಯರು ಪಾಲ್ಗೊಂಡಿದ್ದರು.