ಹಾವೇರಿ: ಬ್ಯಾಡಗಿ ಪಟ್ಟಣದ ಕಾಂಗ್ರೆಸ್ ಮುಖಂಡ
ಚನ್ನಬಸಪ್ಪ ಹುಲ್ಲತ್ತಿ ಮನೆ ಮೇಲೆ ಭಾನುವಾರ ಐಟಿ ದಾಳಿ ನಡೆದಿದೆ.
ಬ್ಯಾಡಗಿ ಪಟ್ಟಣದ ವಿದ್ಯಾನಗರದಲ್ಲಿರುವ ಚನ್ನಬಸಪ್ಪ ಮನೆಯಲ್ಲಿ
ಬೆಳಿಗ್ಗೆಯಿಂದ ನಿರಂತರವಾಗಿ ಶೋಧನೆ ಕಾರ್ಯ ಮುಂದುವರೆದಿತ್ತು.
ಚನ್ನಬಸಪ್ಪ ಮನೆಯಲ್ಲಿ ಒಟ್ಟು 2 ಕೋಟಿ 85 ಲಕ್ಷ ರೂಪಾಯಿ ಪತ್ತೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
2 ಕೋಟಿ 85 ಲಕ್ಷ ರೂಪಾಯಿ ಜತೆಗೆ ದಾಖಲಾತಿಯನ್ನ ತೆಗೆದುಕೊಂಡು ತೆರಳಿದ ಅಧಿಕಾರಿಗಳು.