ಜಿಲ್ಲೆ

ಬ್ಯಾಟರಿ ಕಳವು ಮಾಡಿದ ಆರೋಪಿಗಳ ಬಂಧನ

ಬಳ್ಳಾರಿ : ಇಲ್ಲಿನ ತಾಳೂರು ರಸ್ತೆಯಲ್ಲಿನ ‌ನ್ಯಾಯಾಧೀಶರ ಮನೆಯ ಮುಂಭಾಗದಲ್ಲಿನ ಬ್ಯಾಟರಿ ಕಳವು ಮಾಡಿದ್ದ ಆರೋಪಿಗಳನ್ನು ಬಂಧಿಸಿ, 92 ಸಾವಿರ ಮೌಲ್ಯದ ಬ್ಯಾಟರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ರೇಣುಕಾ ನಗರದ ರವಿ, ಹರಿಶ್ಚಂದ್ರ ನಗರದ ನಿವಾಸಿಗಳಾದ ಈಶ್ವರ, ಹನುಮಂತ ಬಂಧಿತರು. ಇವರನ್ನು ಇಲ್ಲಿನ‌ ಕೆಇಬಿ ವೃತ್ತದಲ್ಲಿ ವಶಕ್ಕೆ‌ ಪಡೆದು ವಿಚಾರಿಸಿದ ವೇಳೆ ತಲಾ ಎರಡು ಬ್ಯಾಟರಿ, ಇನ್ ವರ್ಟರ್ ಕಳ್ಳತನ ‌ಮಾಡಿರುವುದಾಗಿ ಒಪ್ಪಿಕೊಂಡಿರುತ್ತಾರೆ. ಈ ಕುರಿತು ಗಾಂಧಿನಗರ ಪೊಲೀಸ್ ‌ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.