ಬೆಂಗಳೂರಿನ ಶ್ರೀ ಗುರುರಾಘವೇಂದ್ರ ಕೋ ಆಪರೇಟಿವ್ ಬ್ಯಾಂಕ್ ಷೇರುದಾರರು ಮತ್ತು ಠೇವಣಿದಾರರ ಹಿತರಕ್ಷಣಾ ವೇದಿಕೆ ವತಿಯಿಂದ ಸೋಮವಾರ ಪ್ರತಿಭಟಿಸಲಾಯಿತು. ಡಾ.ಶಂಕರ ಗುಹಾ, ದ್ವಾರಕನಾಥ ಬೆಳ್ಳೂರ್ ಇತರರಿದ್ದರು. 
ಜಿಲ್ಲೆ

ಬ್ಯಾಂಕ್ ಅವ್ಯವಹಾರ ಪ್ರಕರಣ ಸಿಬಿಐಗೆ ನೀಡಿ

ಬೆಳಗಾವಿ: ಬೆಂಗಳೂರಿನ ಶ್ರೀ ಗುರುರಾಘವೇಂದ್ರ ಕೋ ಆಪರೇಟಿವ್ ಬ್ಯಾಂಕ್‌ನಲ್ಲಿ ನಡೆದಿರುವ 2,400 ಕೋಟಿ ರೂ. ಅವ್ಯವಹಾರದ ಪ್ರಕರಣವನ್ನು ಸಿಬಿಐ ತನಿಖೆಗೆ ಆಗ್ರಹಿಸಿ, ಬ್ಯಾಂಕ್ ಷೇರುದಾರರು ಮತ್ತು ಠೇವಣಿದಾರರ ಹಿತರಕ್ಷಣಾ ವೇದಿಕೆ ವತಿಯಿಂದ ಸೋಮವಾರ ಪ್ರತಿಭಟಿಸಲಾಯಿತು. ರಾಜಧಾನಿ ಬೆಂಗಳೂರಿನಿಂದ ಆಗಮಿಸಿದ್ದ ನೂರಾರು ಪ್ರತಿಭಟನಾಕಾರರು, ಬೆಳಗ್ಗೆ ಸುವರ್ಣಸೌಧದ ಮುಖ್ಯದ್ವಾರದ ಮುಂದೆ ಪ್ರತಿಭಟನೆ ಆರಂಭಿಸುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಪೊಲೀಸ್ ಅಕಾರಿಗಳು ಪ್ರತಿಭಟನೆಯನ್ನು ಸುವರ್ಣ ಗಾರ್ಡನ್ ಆವರಣದಲ್ಲಿ ನಡೆಸುವಂತೆ ತಿಳಿಸಿ, ಕಳುಹಿಸಲು ಮಂದಾದರು. ಪ್ರತಿಭಟನಾಕಾರರು ಹಾಗೂ ಪೊಲೀಸರ ಮಧ್ಯೆ ವಾಗ್ವಾದ ನಡೆಯಿತು.

ಬಳಿಕ, ಹಿರಿಯ ಪೊಲೀಸ್ ಅಕಾರಿಗಳು ಆಗಮಿಸಿ, ಠೇವಣಿದಾರರು ಹಾಗೂ ಗ್ರಾಹಕರ ಮನವೊಲಿಸಿ, ಸುವರ್ಣಗಾರ್ಡನ್‌ನಲ್ಲಿ ಪ್ರತಿಭಟಿಸುವಂತೆ ಸೂಚಿಸಿ ಕಳುಹಿಸಿದರು. ಬಳಿಕ ಪ್ರತಿಭಟನೆ ಉದ್ದೇಶಿಸಿ ಬ್ಯಾಂಕ್ ಷೇರುದಾರರು ಮತ್ತು ಠೇವಣಿದಾರರ ಹಿತರಕ್ಷಣಾ ವೇದಿಕೆ ಮುಖ್ಯ ಪೋಷಕ ಡಾ.ಶಂಕರ ಗುಹಾ, ದ್ವಾರಕನಾಥ ಬೆಳ್ಳೂರ್ ಮಾತನಾಡಿ, ಷೇರುದಾರರು ಹಾಗೂ ಠೇವಣಿದಾರರಿಗೆ ಈಐಇಎಇ ವಿಮೆ ಹಣ ಬಂದ ನಂತರ ಪೂರ್ತಿ ಪ್ರಮಾಣದ ಹಣ ಯಾವ ರೀತಿ ಕೊಡಲಾಗುವುದು ಎನ್ನುವುದರ ಬಗ್ಗೆ ಮಾಹಿತಿ ಸಿಗುತ್ತಿಲ್ಲ. ಬ್ಯಾಂಕ್‌ನಲ್ಲಿ ಹಣ ಇಟ್ಟಿರುವ ನೂರು ಜನ ಠೇವಣಿದಾರರು ಈಗಾಗಲೇ ಪ್ರಾಣ ಕಳೆದುಕೊಂಡಿದ್ದಾರೆ. ಸಂತ್ರಸ್ತ ಕುಟುಂಬದವರಿಗೆ ಸ್ಥಳೀಯ ಶಾಸಕರು ಅಥವಾ ಸಂಸದರು ಸಾಂತ್ವನವನ್ನೂ ಹೇಳಿಲ್ಲ. ತನಿಖೆ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬ ಮಾಹಿತಿ ಇಲ್ಲವೇ ಇಲ್ಲ. ಹೀಗಾಗಿ ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.