ಜಿಲ್ಲೆ

ಬ್ಯಾಂಕ್ ಅಧಿಕಾರಿಗಳಿಗೆ ಸಚಿವ ಶರಣಬಸಪ್ಪ ಚಾಟಿ

ಯಾದಗಿರಿ: ಸಣ್ಣ ಉದ್ದಮಿಗಳಿಗೆ ಬ್ಯಾಂಕ್ ಗಳು ಸಾಲ ಒದಗಿಸಲು ಸತಾಯಿಸುತ್ತವೆ. ಆದರೆ, ದೊಡ್ಡ ಉದ್ಯಮಿಗಳ ಮನೆ ಬಾಗಲಿಗೆ ಹೋಗಿ ಸಾಲ ಸೌಲತ್ತು ಕೊಡುತ್ತಾರೆ. ಈ ತಾರತಮ್ಯ ನಿಲ್ಲಿಸಬೇಕು ಎಂದು ಸಚಿವ ಶರಣಬಸಪ್ಪ ದರ್ಶನಾಪುರ ದರ್ಶನಾಪುರ ರಾಷ್ಟ್ರೀಕೃತ ಬ್ಯಾಂಕ್ಗಳಿಗೆ ಚಾಟಿ ಬೀಡಿದರು.

ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂನಲ್ಲಿ ಸೋಮವಾರ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ, ಸಿಡ್ಬಿ ಮತ್ತು ಕಾಸಿಯಾದ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಕರೊನಾ ನಂತರ ದೇಶದಲ್ಲಿ ಅನೇಕ ಸಣ್ಣ ಕೈಗಾರಿಕೆಗಳು ಸ್ಥಗಿತಗೊಂಡು ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ದೇಶದ ಅಭಿವೃದ್ಧಿಯಲ್ಲಿ ಸಣ್ಣ ಕೈಗಾರಿಕೆಗಳ ಪಾತ್ರ ಹೆಚ್ಚಿದೆ ಎಂದರು.

ಯಾದಗಿರಿ ಜಿಲ್ಲೆಯ ಹತ್ತಿ, ಭತ್ತ ಮತ್ತು ಮೆಣಸಿನಕಾಯಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಾರೆ. ಅವರಿಗೆ ಸರಿಯಾದ ಮಾರುಕಟ್ಟೆ ವ್ಯವಸ್ಥೆಯಾದರೆ ರೈತರು ಆಥರ್ಿಕವಾಗಿ ಸಬಲರಾಗಲು ಸಾಧ್ಯವಾಗಲಿದೆ ಎಂದರು.