ಕಾರವಾರ: ಬ್ಯಾಂಕ್ ಅಧಿಕಾರಿಗಳ ಹೆಸರಲ್ಲಿ ಕರೆ ಮಾಡಿ,ಹೆಚ್ಚಿನ ಲಾಭ ನೀಡುವುದಾಗಿ ನಂಬಿಸಿ ಮಹಿಳೆಯಿಂದ ಹಣ ಪಡೆದು ವಂಚಿಸಿದ ಇಬ್ಬರನ್ನು ಜಿಲ್ಲಾ ಸಿಇಎನ್ ಠಾಣೆ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಕುಮಟಾದ ಣನೆಲ್ಲಿಕೇರಿಯ ಮುಸ್ತಫಾ ಫಕೀರಸಾಬ್ ಶೇಕ್, ಉತ್ತರ ಪ್ರದೇಶ ಬರೇಲಿಯ
ಮಹಮ್ಮದ್ ರಿಜ್ವಾನ್ ಮುಕ್ತಿಯಾರ ಅಹಮ್ಮದ್ ಬಂಧಿತರು.
ಅಂಕೋಲಾ ಅವರ್ಸಾದ ಮಹಿಳೆಯೊಬ್ಬಳಿಗೆ 7483361129 ಸಂಖ್ಯೆಯಿಂದ ಜು.7 ರಂದು ಬ್ಯಾಂಕ್ ಅಧಿಕಾರಿಗಳ ಹೆಸರಲ್ಲಿ ಕರೆ ಮಾಡಿ, 10 ಸಾವಿರ ರೂ. ತೊಡಗಿಸಿದಲ್ಲಿ 85 ದಿನದಲ್ಲಿ 2.25 ಲಕ್ಷ ರೂ. ನೀಡುವುದಾಗಿ ನಂಬಿಸಿದ್ದರು. ನಂಬಿದ ಮಹಿಳೆ 9634875076 ಸಂಖ್ಯೆಗೆ ಫೋನ್‌ಪೇ ಮೂಲಕ 10 ಸಾವಿರ ರೂ. ಪಾವತಿಸಿದ್ದರು. ಆದರೆ ಅನುಮಾನಗೊಂಡು ಸಿಇಎನ್ ಅಪರಾಧ ಠಾಣೆ ಇನ್ಸ್ ಪೆಕ್ಟರ್ ನಿತ್ಯಾನಂದ ಪಂಡಿತ ತನಿಖೆ ಕೈಗೊಂಡು ಇಬ್ಬರನ್ನು ಬಂಧಿಸಿದ್ದಾರೆ.
ಠಾಣೆಯ ಸಿಬ್ಬಂದಿ ಸುದರ್ಶನ ನಾಯ್ಕ, ಮಂಜುನಾಥ ಹೆಗಡೆ,
ಮಹೇಶ, ಕೃಷ್ಣ, ರಾಜು, ಚಂದ್ರಶೇಖರ, ಶಿವಾನಂದ, ಹನುಮಂತ, ವಿವೇಕ, ಉಮೇಶ ನೇಯವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
7483361129 ಹಾಗೂ 9634875076 ಸಂಖ್ಯೆಗಳಿಂದ ಜಿಲ್ಲೆಯ ಯಾರಿಗಾದರೂ ಕರೆ ಬಂದಿದ್ದರೆ. ಮೋಸ ಮಾಡಲು ಯತ್ನಿಸಿದ್ದರೆ ದೂರು ನೀಡುವಂತೆ 9480805267 ಅಥವಾ 08382-222522 ಸಂಖ್ಯೆಯನ್ನು ಸಂಪರ್ಕಿಸುವಂತೆ ಸಿಇಎನ್ ಠಾಣೆ ಪ್ರಕಟಣೆ ತಿಳಿಸಿದೆ.
.....