ಕಲಬುರಗಿ: ಬೌದ್ಧರ ಪವಿತ್ರ ತಾಣ ಬುದ್ಧಗಯಾದ ಮಹಾಬೋಧಿ ಮಹಾವಿಹಾರದ ಆಡಳಿತ ಮಂಡಳಿ (ಬಿಟಿಎಂಸಿ) ಪುನರ್ ರಚನೆ ಹಾಗೂ ಬೋಧ ಗಯಾ ಮಂದಿರ ಕಾಯ್ದೆ ೧೯೪೯ ರದ್ದುಪಡಿಸುವಂತೆ ಒತ್ತಾಯಿಸಿ ಸೆ.೧೭ರಂದು ಪಟ್ನಾ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಕೆಂಪಣ್ಣ ಸಾಗ್ಯಾ ತಿಳಿಸಿದರು. ಬಿಟಿಎಂಸಿಯಲ್ಲಿ ನಾಲ್ವರು ಬೌದ್ಧರು, ನಾಲ್ವರು ಹಿಂದೂಗಳು ಹಾಗೂ ಜಿ¯್ಲÁಧಿಕಾರಿ ಇದ್ದಾರೆ. ಇದರಲ್ಲಿನ ನಾಲ್ವರು ಹಿಂದು ಸದಸ್ಯರ ಬದಲಿಗೆ ಬೌದ್ಧರಿಗೆ ಅವಕಾಶ ಕಲ್ಪಿಸಬೇಕು ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಕುಮಾರ ರಾಮನಗರ ಮಾತನಾಡಿ, ಸೆ.೧೭ರಂದು ಐದು ಲP್ಷÀ ಬೌದ್ಧರಿಂದ ಶಾಂತಿಯುತ ರ‍್ಯಾಲಿ ಹಾಗೂ ಬಹಿರಂಗ ಸಭೆ ನಡೆಯಲಿದೆ. ರಾಜ್ಯದ ಎಲ್ಲ ಜಿ¯್ಲÉಗಳ ಸಾವಿರಾರು ಬೌದ್ಧ ಉಪಾಸಕರು ಹಾಗೂ ಅಂಬೇಡ್ಕರ್ ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು. ಶ್ಯಾಮ ಘಾಟಿಗೆ, ಚಂದ್ರು ಬಿ.ಚಕ್ರವರ್ತಿ, ರಮಾನಂದ ಮಂಡ್ಯ, ಬಸವರಾಜ ಜಮಖಂಡಿ, ಆನಂದ ಬೆಳ್ಳಾರೆ ಮಂಗಳೂರು, ಬಸವರಾಜ ಬಾಡಿಯಾಳ, ಮಲ್ಲಿಕಾರ್ಜುನ ಪೂಜಾರಿ ಇತರರಿದ್ದರು.