ಜಿಲ್ಲೆ

ಬೋರ್ಗರೆದ ಭೋಗಾವತಿ ನದಿ : ಗಾರಂಪಳ್ಳಿ ಸೇತುವೆ ಜಲಾವೃತ್ತ ಸಂಚಾರ ಕಡಿತ

ಕಲಬುರಗಿ : ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುವುದರಿಂದ ಚಿಂಚೋಳಿ ತಾಲೂಕಿನ ನಾಗರಾಳ ಮುಲ್ಲಾಮಾರಿ ಜಲಾಶಯದ ಎರಡು ಗೇಟ್ ಮೂಲಕ ಸುಮಾರು 1500 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಇದರಿಂದಾಗಿ ಮುಲ್ಲಾಮಾರಿ ಮತ್ತು ಭೋಗಾವತಿ ನದಿ ಬೋರ್ಗರೆಯುತ್ತಿವೆ.

ಡ್ಯಾಂ ನೀರು ಭೋಗವತಿ ನದಿಗೆ ಹರಿದು ಬರುತ್ತಿದ್ದು, ನದಿ ಪಾತ್ರದ ಗಾರಂಪಳ್ಳಿ ಸಂಪರ್ಕ ಸೇತುವೆ ಮುಳುಗಡೆಯಾಗಿ, ಸಂಪರ್ಕ ಕಡಿತಗೊಂಡಿದೆ. ಅದೇ ರೀತಿ ಕನಕಪುರ ಬ್ರೀಜ ಕಂ ಬ್ಯಾರೇಜ್ ಸೇತುವೆ ಮುಳುಗಡೆಯಾಗಿ ಸಂಪರ್ಕ ಸ್ಥಗಿತಗೊಂಡಿದೆ.