ಬೋರಗಾಂವ: ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಎಲ್ಲ ಪಟ್ಟಣ ಪಂಚಾಯಿತಿ ಸದಸ್ಯರು ಶ್ರಮಿಸುತ್ತಿದ್ದಾರೆ. ಶೀಘ್ರದಲ್ಲೇ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಭೇಟಿ ಮಾಡಿ ನಗರವಾಸಿಗಳಿಗೆ ಶುದ್ಧ ನೀರು, ರಸ್ತೆ, ಚರಂಡಿ ಹಾಗೂ ಬೀದಿ ದೀಪ ಸೇರಿ ಮೂಲ ಸೌಕರ್ಯ ಕಲ್ಪಿಸುವ ಜತೆಗೆ ನಗರದ ಅಭಿವೃದ್ಧಿಗೆ ವಿಶೇಷ ಅನುದಾನ ತರಲು ಪ್ರಯತ್ನಿಸಲಾಗುವುದು ಎಂದು ಯುವ ಮುಖಂಡ ಉತ್ತಮ ಪಾಟೀಲ ತಿಳಿಸಿದರು.
ಪಟ್ಟಣದ ವಾರ್ಡ್ ನಂ.8 ಮತ್ತು 9ರಲ್ಲಿ ಭಾನುವಾರ 15ನೇ ಹಣಕಾಸು ಆಯೋಗದ 28 ಲಕ್ಷ ರೂ.ಅನುದಾನದಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಪಟ್ಟಣದ ಕುಂಬಾರ ಕೆರೆ ಸೌಂದರ್ಯೀಕರಣ, ಸಾರ್ವಜನಿಕ ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆ ಹಾಗೂ ಕಾಲೇಜು ಆವರಣಕ್ಕೆ ಕಾಂಪೌಂಡ್ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಯೋಜನೆ ರೂಪಿಸಲಾಗಿದೆ ಎಂದರು.
ಪಪಂ ಅಧ್ಯಕ್ಷ ಪಿಂಟು ಕಾಂಬಳೆ, ಉಪಾಧ್ಯಕ್ಷೆ ಭಾರತಿ ವಸವಾಡೆ, ಸದಸ್ಯರಾದ ಅಭಯಕುಮಾರ ಮಗದುಮ್, ದಿಗಂಬರ ಕಾಂಬಳೆ, ಅಮರ ಶಿಂಗೆ, ಜಾವೇದ್ ಮಕಾನದಾರ, ಶೋಭಾ ಹಾವಲೆ ,ಅಶ್ವಿನಿ ಪವಾರ, ಸುವರ್ಣ ಸೋಬಾನೆ, ತಾನಾಜಿ ಗೋಸಾವಿ, ದಶರತ ಗೋಸಾವಿ, ದಿಲೀಪ್ ಗೋಸಾವಿ, ಅಶೋಕ ವಡ್ಡರ, ಭೂಪಾಲ್ ವಡ್ಡರ, ಶ್ರೀಕಾಂತ ವಡ್ಡರ, ಸಖಾರಾಮ್ ವಡ್ಡರ, ಅನಿಲ ವಡ್ಡರ, ಬಾಳಾಸಾಹೇಬ ವಡ್ಡರ, ಲಕ್ಷ್ಮಣ ವಡ್ಡರ, ರಾಜಾರಾಮ್ ವಡ್ಡರ, ಸುರೇಖಾ ಗೋಸಾವಿ, ಶೋಭಾ ಗೋಸಾವಿ, ರೇಷ್ಮಾ ಗೋಸಾವಿ, ವಿನೋದ ಜುವೆ, ಉದಯಕುಮಾರ ಹಾವಲೆ ಇತರರಿದ್ದರು.