ಕಾಗವಾಡ ಪಟ್ಟಣದ ಶಿವಾನಂದ ಮಹಾವಿದ್ಯಾಲಯದಲ್ಲಿ ಶಿಕ್ಷಕರ ದಿನ ಆಚರಿಸಲಾಯಿತು. ಡಾ.ಎ.ಎಂ.ಜಕ್ಕಣ್ಣವರ, ಡಾ.ಎಸ್​.ಎ.ಕರ್ಕಿ, ಪ್ರೊ.ವಿ.ಎಸ್​.ತುಗಶೆಟ್ಟಿ, ಪ್ರೊ.ಆರ್​.ಎಸ್​.ನಾಗರಡ್ಡಿ ಇತರರಿದ್ದರು. 
ಜಿಲ್ಲೆ

ಬೋಧನೆಯಲ್ಲಿ ಖುಷಿ ಕಂಡವರು ರಾಧಾಕೃಷ್ಣನ

ಕಾಗವಾಡ: ಡಾ. ಸರ್ವಪಲ್ಲಿ ರಾಧಾಕೃಷ್ಣನ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದರೂ ಶಿಕ್ಷಕ ವೃತ್ತಿಯ ಬಗ್ಗೆ ಅಪಾರ ಗೌರವ ಹೊಂದಿದ್ದರು ಎಂದು ಡಾ.ಎ.ಎಂ.ಜಕ್ಕಣ್ಣವರ ಹೇಳಿದರು.

ಪಟ್ಟಣದ ಕಾಗವಾಡ ಶಿವಾನಂದ ಮಹಾವಿದ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಶಿಕರ ದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು. ಡಾ.ರಾಧಾಕೃಷ್ಣನ ದೇಶ ಕಂಡಂತಹ ಅಪರೂಪದ ಶಿಕರು, ತತ್ವಜ್ಞಾನಿ, ರಾಜಕಾರಣಿಯಾಗಿದ್ದರು. ಅವರು ಬೋಧನಾ ವೃತ್ತಿಯಲ್ಲಿ ವಿಶೇಷ ಪ್ರೀತಿ ಮತ್ತು ಆಸಕ್ತಿ ಹೊಂದಿದ್ದರು ಎಂದರು.

ಪ್ರಾಚಾರ್ಯ ಡಾ.ಎಸ್​.ಎ.ಕರ್ಕಿ ಮಾತನಾಡಿ, ಡಾ.ಸರ್ವಪಲ್ಲಿ ರಾಧಾಕೃಷ್ಣನ್​ ಆದರ್ಶಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದರು.
ಆಡಳಿತಾಧಿಕಾರಿ ಪ್ರೊ.ವಿ.ಎಸ್​.ತುಗಶೆಟ್ಟಿ, ದೈಹಿಕ ಶಿಕ್ಷಣ ಸಹಾಯಕ ಪ್ರಾಧ್ಯಾಪಕ ಪ್ರೊ.ಆರ್​.ಎಸ್​.ನಾಗರಡ್ಡಿ, ಪ್ರೊ.ಜೆ.ಕೆ.ಪಾಟೀಲ ಇತರರಿದ್ದರು.