ಕೆ.ಎಂ.ದೊಡ್ಡಿಯ ಪ್ರಾರ್ಥನಾ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಬಸವರಾಜು ಅವರನ್ನು ಅಭಿನಂದಿಸಲಾಯಿತು. ಸೌಮ್ಯಾ ಕೃಷ್ಣ, ಅಶ್ವಿನಿ, ಸವಿತಾ, ಶೋಭಾರಾಣಿ, ಸ್ಮಿತಾ ಇತರರಿದ್ದರು. 
ಜಿಲ್ಲೆ

ಬೋಧನೆಗೆ ಮುನ್ನ ಅಧ್ಯಯನ ಮುಖ್ಯ

ಅಭಿನಯ್ ಎಚ್.ಎಂ

ಕೆ.ಎಂ.ದೊಡ್ಡಿ: ಶಿಕ್ಷಕರು ತರಗತಿಗೆ ಹೋಗುವ ಮೊದಲು ಪಠ್ಯವನ್ನು ಅಭ್ಯಾಸ ಮಾಡಬೇಕು ಎಂದು ಯಲಾದಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಜಿಲ್ಲಾ ಮುಖ್ಯ ಶಿಕ್ಷಕ ಹಾಗೂ ಉತ್ತಮ ಶಿಕ್ಷಕ ಪ್ರಶಸ್ತಿ ಪುರುಸ್ಕೃತ ಬಸವರಾಜು ಸಲಹೆ ನೀಡಿದರು.

ಇಲ್ಲಿನ ಪ್ರಾರ್ಥನಾ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಶಿಕ್ಷಕರು ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಗುರುತಿಸಿ ಅಂತಹ ಮಕ್ಕಳಿಗೆ ಮನೆಕೆಲಸ ಹಾಗೂ ಆಯಾ ವಿಷಯಗಳನ್ನು ಸಮಗ್ರವಾಗಿ ಪರಿಶೀಲಿಸುವ ಮೂಲಕ ಅವರನ್ನು ಶಿಕ್ಷಣವಂತರನ್ನಾಗಿ ಮಾಡಬೇಕು. ಸ್ಪಷ್ಟ ಓದು, ಶುದ್ಧ ಬರಹ, ಅಭಿವ್ಯಕ್ತಿ ಸಾಮರ್ಥ್ಯಗಳ ಬಗ್ಗೆ ಮತ್ತು ಶಿಕ್ಷಣದ ಕೌಶಲ, ಸಾಮರ್ಥ್ಯ ಹಾಗೂ ಬುದ್ಧಿವಂತಿಕೆ ಹೊರಹಾಕಲು ಪ್ರೋತ್ಸಾಹ ನೀಡಬೇಕು ಎಂದರು.

ಶಿಕ್ಷಕರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಶಿಕ್ಷಕರಿಗೆ ಬಹುಮಾನ ನೀಡಲಾಯಿತು. ಸಂಸ್ಥೆಯ ಅಧ್ಯಕ್ಷೆ ಸೌಮ್ಯಾ ಕೃಷ್ಣ, ಶಿಕ್ಷಕರಾದ ಅಶ್ವಿನಿ, ಸವಿತಾ, ಶೋಭಾರಾಣಿ, ಸ್ಮಿತಾ, ರಮ್ಯಾ, ಕೃತಿಕಾ, ಪ್ರಿಯಾಂಕಾ, ಕೃತಿಕಾ, ರಂಜಿತಾ, ರೂಹಿ, ಕೆ.ಎನ್.ಅನುಪಮಾ ಇದ್ದರು.