ಬೀದರ್: ನಗರದಲ್ಲಿ ಫೆಬ್ರುವರಿ ಮೊದಲ ವಾರದಲ್ಲಿ ಪ್ರಥಮ ಬಾರಿಗೆ ಬೊಮ್ಮಗೊಂಡೇಶ್ವರ ಉತ್ಸವ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಗೊಂಡ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂತೋಷ ಜೋಳದಾಪಕೆ ಹೇಳಿದರು.
ಇಲ್ಲಿಯ ಗಾಂಧಿಗಂಜ್‍ನಲ್ಲಿ ಇರುವ ಕನಕ ಭವನದಲ್ಲಿ ನಡೆದ ಬೊಮ್ಮಗೊಂಡೇಶ್ವರ ಉತ್ಸವ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು.
ಬೊಮ್ಮಗೊಂಡೇಶ್ವರರು ಗೊಂಡ (ಕುರುಬ) ಸಮುದಾಯದ ಆರಾಧ್ಯ ದೈವ. ಯುವ ಪೀಳಿಗೆಗೆ ಅವರ ಜೀವನ ಹಾಗೂ ಸಾಧನೆಯನ್ನು ಪರಿಚಯಿಸಲು ಜಿಲ್ಲಾ ಗೊಂಡ ವಿದ್ಯಾರ್ಥಿ ಸಂಘದಿಂದ ಎರಡು ದಿನಗಳ ಉತ್ಸವ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಮೊದಲ ದಿನ ಬೊಮ್ಮಗೊಂಡೇಶ್ವರ ವೃತ್ತದಿಂದ ನೆಹರೂ ಕ್ರೀಡಾಂಗಣದವರೆಗೆ ಬೊಮ್ಮಗೊಂಡೇಶ್ವರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಲಿದೆ. 101 ಡೊಳ್ಳು ತಂಡಗಳು, ವಿವಿಧ ಕಲಾ ತಂಡಗಳು ಮೆರವಣಿಯ ಪ್ರಮುಖ ಆಕರ್ಷಣೆ ಆಗಲಿವೆ ಎಂದು ಹೇಳಿದರು.
ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಎರಡು ದಿನ ವೇದಿಕೆ ಕಾರ್ಯಕ್ರಮಗಳು ನಡೆಯಲಿವೆ. ಉದ್ಘಾಟನಾ ಸಮಾರಂಭ, ಬೊಮ್ಮಗೊಂಡೇಶ್ವರರ ಜೀವನ- ಸಾಧನೆ, ಗೊಂಡ ಸಮಾಜದ ಸ್ಥಿತಿಗತಿ ಕುರಿತ ಚಿಂತನ-ಮಂಥನ, ವಿಶೇಷ ಉಪನ್ಯಾಸ, ಗೊಂಡ ಸಮಾಜದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಜರುಗಲಿವೆ ಎಂದು ತಿಳಿಸಿದರು.
ಗೊಂಡ ಸಮಾಜದ ಮುಖಂಡರಾದ ಭೀಮಸಿಂಗ್ ಮಲ್ಕಾಪುರ, ಬೊಮ್ಮಗೊಂಡ ಚಿಟ್ಟಾವಾಡಿ, ಸಾಹಿತಿ ಸಂಜೀವಕುಮಾರ ಅತಿವಾಳೆ, ಉದ್ಯಮಿ ಮೊಗಲಪ್ಪ ಚಿಲ್ಲರ್ಗಿ, ಶಿವಕುಮಾರ ಹೂಗೇರಿ, ಆತ್ಮಾನಂದ ಬಂಬಳಗಿ, ಧನರಾಜ ವಗ್ಗೆ, ಡಾ. ಉದಯಸಿಂಗ್, ಅಮೀತ್ ಸೋಲಪುರ, ಸಂಜೀವಕುಮಾರ ಅಲ್ಲೂರೆ, ಬಜರಂಗ ಕಾಶೆಂಪುರ, ಧನರಾಜ ಹಿಪ್ಪಳಗಾಂವ್, ಕಲ್ಲಪ್ಪ ಹುಲಸೂರೆ, ಮಾರುತಿ ಕಪಲಾಪುರ, ವಿಠ್ಠಲ ದುರ್ಗೆ, ವಿಜಯಕುಮಾರ ತೋರಣೆ, ನಾಗೇಶ ಯಾಕತಪುರ, ಪ್ರಕಾಶ ಗೋರನಳ್ಳಿ, ಬಸವರಾಜ ಕುತ್ತಾಬಾದ್, ಸಿದ್ದಗೊಂಡ ಸಿದ್ಧೇಶ್ವರ, ವೀರೇಶ ಜಾಂಪಾಡೆ, ತುಕ್ಕಪ್ಪ ಸಾತೋಳಿ, ಎಂ.ಪಿ. ವೈಜಿನಾಥ, ಓಂಕಾರ ಕನ್ನಳ್ಳಿ, ಜಾಲೇಂದ್ರ ಮಾಳೆಗಾಂವ್, ಅಶೋಕ ಅಲಿಯಂಬರ್ ಇದ್ದರು.