ಜಿಲ್ಲೆ

ಬೊಮ್ಮಂಜಿಕೆರಿ ಶ್ರೀಭದ್ರಕಾಳಿ ದೇವಿ ವಾರ್ಷಿಕೋತ್ಸವ

ನಾಪೋಕ್ಲು: ಸಮೀಪದ ಕೊಳಕೇರಿ ಗ್ರಾಮದಲ್ಲಿರುವ ಬೊಮ್ಮಂಜಿಕೆರಿ ಶ್ರೀಭದ್ರಕಾಳಿ ದೇವಿಯ ವಾರ್ಷಿಕ ಉತ್ಸವ ಶ್ರದ್ಧಾಭಕ್ತಿಯಿಂದ ಜರುಗಿತು.

ಉತ್ಸವದ ಅಂಗವಾಗಿ ಪೋದ ಹಾಗೂ ಭದ್ರಕಾಳಿ ಮುಡಿ ಕೋಳ ನೆರವೇರಿತು. ಉತ್ಸವದಲ್ಲಿ ಭಕ್ತಾದಿಗಳು ತಮ್ಮ ಇಷ್ಟಾರ್ಥ ಸಿದ್ಧಿಗೆ ವಿವಿಧ ಹರಕೆ ಕಾಣಿಕೆಗಳನ್ನು ಒಪ್ಪಿಸಿ ಪ್ರಸಾದ ಸ್ವೀಕರಿಸಿ ಧನ್ಯತಾಭಾವ ಹೊಂದಿದರು.

ಉತ್ಸವದಲ್ಲಿ ದೇವಾಲಯದ ತಕ್ಕ ಮುಖ್ಯಸ್ಥರು, ಆಡಳಿತ ಮಂಡಳಿಯ ಪದಾಧಿಕಾರಿಗಳು, ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.