Ratotsava 
ಜಿಲ್ಲೆ

ಬೈಲಾಂಜನೇಯ ಸ್ವಾಮಿ ರಥೋತ್ಸವ ಸಂಪನ್ನ

ವಿಜಯವಾಣಿ ಸುದ್ದಿಜಾಲ ತ್ಯಾಮಗೊಂಡ್ಲು
ಪಟ್ಟಣದ ದೇವರಾಜ್ ಮೊದಲಿಯಾರ್ ವೃತ್ತದ ಆಂಜನೇಯ, ಸೀತಾ ಲಕ್ಷ್ಮಣ ಸಮೇತ ಶ್ರೀರಾಮಚಂದ್ರ ಸ್ವಾಮಿಯ ಬ್ರಹ್ಮ ರಥೋತ್ಸವ ಶುಕ್ರವಾರ ಮಧ್ಯಾಹ್ನ 1.40ಕ್ಕೆ ಅದ್ದೂರಿಯಾಗಿ ನೆರವೇರಿತು.
ವೀರಗಾಸೆ, ನಾಸಿಕ್ ಡೋಲ್, ಕರಿಯಣ್ಣ ಕೆಂಚಣ್ಣ ದೇವರ ಕುಣಿತ, ಪೂಜಾ ಕುಣಿತ, ಪಟದ ಕುಣಿತ, ಚಿಟ್ಟಿಮೇಳ, ತಮಟೆವಾದ್ಯ, ಕೋಲಾಟ ಮತ್ತು ಮಂಗಳ ವಾದ್ಯಗಳು ಮೇಳೈಸಿದವು. ಭಕ್ತರ ೋಷಣೆಗಳು ಮುಗಿಲು ಮುಟ್ಟುವಂತಿತ್ತು.
ಜೆಡಿಎಸ್ ಅಭ್ಯರ್ಥಿ ಡಾ.ಕೆ.ಶ್ರೀನಿವಾಸಮೂರ್ತಿ, ಮುಖಂಡರಾದ ಕಾರೇಹಳ್ಳಿ ಗುರುಪ್ರಕಾಶ್, ಟಿ.ಆರ್.ರಾಜು, ಸುನಿಲ್, ರಂಗಸ್ವಾಮಿ, ಪುಟ್ಟಸ್ವಾಮಿ, ಸುಜಿತ್ ಮತ್ತಿತರರು ಪಾಳ್ಗೊಂಡು ವಿಶೇಷ ಪೂಜೆ ಸಲ್ಲಿಸಿದರು.
ಭಕ್ತರು ಬಾಳೆಹಣ್ಣು ದವನವನ್ನು ರಥಕ್ಕೆ ಎಸೆದು ಹರಕೆ ತೀರಿಸಿದರು. ಪಟ್ಟಣದ ಕುಂಬಾರ, ಕುರುಹಿನ ಶೆಟ್ಟಿ, ದೇವಾಂಗ, ಆರ‌್ಯವೈಶ್ಯ, ಜ್ಯೋತಿಪಣ,ಅಗ್ನಿವಂಶ ಕ್ಷತ್ರಿಯ, ಆರ್ಯ ಈಡಿಗ ಸಮುದಾಯದವರು ಮಜ್ಜಿಗೆ, ಪಾನಕ, ಕೋಸಂಬರಿ ವಿತರಿಸಿ, ಅನ್ನದಾನ ನಡೆಸಿಕೊಟ್ಟರು.
ರಥೋತ್ಸವ ಹಿನ್ನೆಲೆಯಲ್ಲಿ ಗುರುವಾರ ಸಂಜೆಯಿಂದಲೇ ಅರಣಿ ಸೇವೆ, ಮತ್ಸಂಗ್ರಹಣ, ಅಂಕುರಾರ್ಪಣೆ, ಗಜೇಂದ್ರಮೋಕ್ಷ, ಕಳಸಾರೋಹಣ, ರಾತ್ರಿ 10ಕ್ಕೆ ಬಿಲ್ಲನಕೋಟೆ ಶ್ಯಾನುಭೋಗರ ಕುಟುಂಬದವರಿಂದ ಕಲ್ಯಾಣೋತ್ಸವ ಕಾರ್ಯಕ್ರಮ ಜರುಗಿತು. ಆಗಮಿಕ ಟಿ.ಎಚ್.ಅಶ್ವತ್ಥ್‌ನಾರಾಯಣ ಶರ್ಮ, ಅರ್ಚಕ ಶ್ರೀಧರಾಚಾರ್ಯ ನೇತೃತ್ವದಲ್ಲಿ ಪೂಜಾ ಕಾರ್ಯ ನೆರವೇರಿದವು.
ಇನ್‌ಸ್ಪೆಕ್ಟರ್ ಸುನಿಲ್ ಮತ್ತು ಸಿಬ್ಬಂದಿ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು. ಮುಖಂಡರಾದ ಸಿದ್ದರಾಜು, ಚಂದ್ರಣ್ಣ, ನವೀನ್ ಕುಮಾರ್, ಟಿ.ಆರ್.ನವೀನ್, ಟಿ.ಎನ್.ಪ್ರದೀಪ್, ರಾಕೇಶ್, ಟಿ.ಎನ್.ಹನುಮಂತರಾಜು, ಶಿವರಾಜು, ಸೋಮಶೇಖರ್ ಇತರರು ಇದ್ದರು.