ಜಿಲ್ಲೆ

ಬೈಲಕುಪ್ಪೆಯಲ್ಲಿ ಉತ್ತಮ ಮಳೆ

ಬೈಲಕುಪ್ಪೆ: ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪೆ ಸುತ್ತಮುತ್ತ ಗುರುವಾರ ಉತ್ತಮ ಮಳೆಯಾಗಿದೆ.


ತಿಂಗಳಿಂದ ಬಿಸಿಲಿನಿಂದ ಕಂಗಾಲಾಗಿದ್ದ ಅವರ್ತಿ, ಚನ್ನಕಲ್ ಕಾವಲ್, ದೊಡ್ಡ ಹರವೇ, ದೊಡ್ಡ ಹೊಸೂರು, ಮರಡಿಯೂರು, ಮಂಚದೇವನಹಳ್ಳಿ, ಕೊಪ್ಪ, ಸುತ್ತಮುತ್ತ ಗ್ರಾಮಗಳಲ್ಲಿ ಸಾಧಾರಣ ಮಳೆ ಆಯಿತು.

ಗುರುವಾರ ಬಿದ್ದ ಮಳೆಯಿಂದ ರೈತರು ನಿಟ್ಟುಸಿರು ಬಿಟ್ಟಿದ್ದು, ರಾಗಿ ಬಿತ್ತನೆ ಸಿದ್ಧತೆಗೆ ಮುಂದಾಗಿದ್ದಾರೆ. ಈಗಾಗಲೇ ಬಿತ್ತನೆ ಮಾಡಿದ್ದ ಜೋಳ ಮಳೆಯಿಲ್ಲದೆ ಒಣಗುತ್ತಿತ್ತು. ಇದೀಗ ಉತ್ತಮ ಮಳೆಯಾಗುತ್ತಿರುವುದರಿಂದ ಜೋಳದ ಬೆಳೆಗೆ ಅನುಕೂಲವಾಗಿದೆ ಎಂದು ರೈತರು ಹರ್ಷಗೊಂಡಿದ್ದಾರೆ.