ಗೋಕಾಕ: ಮುಖ್ಯ ರಸ್ತೆಯಿಂದ ಬಡಿಗವಾಡ ರಸ್ತೆಯವರೆಗೆ ಬೈ ಪಾಸ್ ರಸ್ತೆ ನಿರ್ಮಾಣದಿಂದ ಟಪ್ರಭಾ ನಗರದ ಮುಖ್ಯ ರಸ್ತೆಯ ಜನದಟ್ಟಣೆ ಆದಷ್ಟು ಮಟ್ಟಿಗೆ ಕಡಿಮೆಯಾಗಿ ಸಾರ್ವಜನಿಕರಿಗೆ ಅನುಕೂವಾಗಲಿದೆ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ಪಟ್ಟಣದಲ್ಲಿ ಗೋಕಾಕ ಮುಖ್ಯ ರಸ್ತೆಯಿಂದ ಬಡಿಗವಾಡ ರಸ್ತೆಯವರೆಗೆ ನಗರೋತ್ಥಾನ 4 ನೇ ಹಂತದ ಯೋಜನೆಯಲ್ಲಿ ಸುಮಾರು 4.25 ಕೋಟಿ ರೂ. ಬೈಪಾಸ್ ರಸ್ತೆ ಡಾಂಬರೀಕರಣ ಕಾಮಗಾರಿಗೆ ಗುರುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ನಗರವು ದಿನೇ ದಿನೇ ಬೆಳೆಯುತ್ತಿದ್ದು, ನಗರ ಮದ್ಯದಲ್ಲಿರುವ ಮುಖ್ಯ ರಸ್ತೆಯಲ್ಲಿರುವ ಕೆಲ ಅಂಗಡಿಕಾರರು ಅತಿಕ್ರಮಣ ಮಾಡಿದ್ದರಿಂದ ರಸ್ತೆ ಅಗಲೀಕರಣ ಕಡಿಮೆಯಾಗಿ, ಸಂಚಾರಕ್ಕೆ ತೊಂದರೆಯಾಗುತ್ತಿರುವ ಬಗ್ಗೆ ಗ್ರಾಮಸ್ಥರು ನನ್ನ ಗಮನಕ್ಕೆ ತಂದಿದ್ದಾರೆ. ಆದಷ್ಟು ಬೇಗನೆ ಸಮಸ್ಯೆ ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು.
ನಗರಕ್ಕೆ ಪುರಸಭೆ ಕಟ್ಟಡ, ಸರ್ಕಾರಿ ಆಸ್ಪತ್ರೆ, ಮತ್ತು ಬಸ್ ನಿಲ್ದಾಣಕ್ಕೆ ಜಾಗೆಯ ಕೊರತೆ ಇದ್ದು, ಕೆ.ಎಚ್.ಐ ಆಸ್ಪತ್ರೆಯ ಮುಖ್ಯಾಧಿಕಾರಿಗಳಿಗೆ ಜಾಗೆ ನೀಡಲು ಗ್ರಾಮಸ್ಥರ ಮುಖಾಂತರ ಮನವಿ ಸಲ್ಲಿಸಲಾಗಿದೆ. ಆದರೆ, ಆಸ್ಪತ್ರೆಯವರು ಇಲ್ಲಿಯ ವರೆಗೆ ಯಾವದೇ ಉತ್ತರ ನೀಡಿರುವುದಿಲ್ಲ. ಸೂಕ್ತ ಸ್ಥಳದ ಅನ್ವೇಷನೆಗಾಗಿ ಸಂಬಂಧಪಟ್ಟ ಅಧಿಕಾರಿಗಳ ಜತೆ ಮಾತನಾಡಿದ್ದೇನೆ ಆದಷ್ಟು ಬೇಗನೆ ಪರಿಹಾರ ಸಿಗುವ ನಿರೀೆ ಇದ್ದು, ಟಪ್ರಭಾದ ಮೂಲಸೌಕರ್ಯಗಳ ಕೊರತೆ ನಿವಾರಣೆಯಾಗುತ್ತದೆ ಎಂದರು.
ಹಿರಿಯ ಮುಖಂಡ ಡಿ.ಎಂ.ದಳವಾಯಿ ಮಾತನಾಡಿ ಗೋಕಾಕ ಮುಖ್ಯ ರಸ್ತೆಯಿಂದ ಬಡಿಗವಾಡ ರಸ್ತೆಯವರೆಗೆ ಬೈ ಪಾಸ್ ರಸ್ತೆಯಿಂದ ಟಪ್ರಭಾ ಜನತೆಗೆ ಹಾಗೂ ರೈತರಿಗೆ ಸಾಕಷ್ಟು ಅನುಕೂಲವಾಗಿದೆ. ಇದರ ಜತೆಗೆ ಸುಮಾರು ವರ್ಷಗಳಿಂದ ಟಪ್ರಭಾ ಮೃತ್ಯುಂಜಯ ವೃತ್ತದಿಂದ ಕಾಳಮ್ಮಾ ದೇವಿ ದೇವಸ್ಥಾನಕ್ಕೆ ಹೋಗುವ ಬೈಕ್ ಸವಾರರಿಗೆ, ವಾಹನ ಚಾಲಕರಿಗೆ, ಮಹಿಳೆಯರಿಗೆ ಹಾಗೂ ಶಾಲಾ ಮಕ್ಕಳಿಗೆ ಸಾಕಷ್ಟು ತೊಂದರಯಾಗುತ್ತಿದ್ದು, ನೆನೆಗುದಿಗೆ ಬಿದ್ದ ಮಾಸ್ಟರ್ ಪ್ಲಾ$್ಯನ್ ಆದಷ್ಟು ಬೇಗನೇ ಜಾರಿಗೆ ತರುವಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಶಾಸಕರಿಗೆ ಗ್ರಾಮಸ್ಥರ ಪರವಾಗಿ ಮನವಿ ಮಾಡಿದರು. ಟಪ್ರಭಾ, ಪಾಮಲದಿನ್ನಿ, ಶಿಂದಿಕುರಬೇಟ, ಧುಪದಾಳ ಗ್ರಾಮದ ಹಿರಿಯರು ಹಾಗೂ ಮುಖಂಡರು. ಪುರಸಭೆ ಸಿಬ್ಬಂದಿ ಇದ್ದರು.