ಜಿಲ್ಲೆ

ಬೈಕ್​ ಕಳ್ಳನ ಬಂಧನ, 3 ವಾಹನ ಜಪ್ತಿ

ಬೆಳಗಾವಿ: ನಗರದಲ್ಲಿ ವಾಹನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಬಾಗ್​ ಠಾಣೆ ಪೊಲೀಸರು ಸೋಮವಾರ ಓರ್ವನನ್ನು ಬಂಧಿಸಿ, ಮೂರು ಬೈಕ್​ಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ. ಉದ್ಯಮಬಾಗದ ರಾಜಾರಾಮ ನಗರದ ವಿಶಾಲ ಮಹಾದೇವ ಮಕ್ಕಳಗೇರಿ (24) ಬಂಧಿತ ಆರೋಪಿ.

ನಗರದಲ್ಲಿ ವಿವಿಧ ಪೊಲೀಸರ ಠಾಣೆಗಳ ವ್ಯಾಪ್ತಿಯಲ್ಲಿ ನಡೆದಿರುವ ಬೈಕ್​ಗಳ ಕಳ್ಳತನ ಕುರಿತು ಪೊಲೀಸರು ಕೈಗೊಂಡಿರುವ ತನಿಖೆ ವೇಳೆ ಕಳ್ಳನನ್ನು ಬಂಧಿಸಿ ಮೂರು ಬೈಕ್​ ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಪಿ.ವಿ.ಸ್ನೇಹಾ ತಿಳಿಸಿದ್ದಾರೆ.