ಕಲಬುರಗಿ: ನಗರದ ಸುಪರ್ ಮಾರ್ಕೆಟ್‌ನಲ್ಲಿ ಬೈಕ್‌ನ ಡಿಕ್ಕಿಯಲ್ಲಿ ಇಟ್ಟ 2 ಲಕ್ಷ ರೂ. ಕಳ್ಳತನವಾದ ಘಟನೆ ಗುರುವಾರ ಸಂಜೆ ನಡೆದಿದೆ.
ಸುಪರ್ ಮಾರ್ಕೆಟ್‌ನ ವ್ಯಾಪಾರಿ ನಿತೀನ್ ವೇಂಕಟೇಶ ಬಾವಗೆ ಹಣ ಕಳೆದುಕೊಂಡ ಬಗ್ಗೆ ಚೌಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ವ್ಯಾಪಾರಿ ನಿತೀನ್ ವೇಂಕಟೇಶ ಗುರುವಾರ ಸಂಜೆ 8.30ಕ್ಕೆ ತನ್ನ ಕಿರಾಣಿ ಅಂಗಡಿ ಬಂದ್ ಮಾಡಿ ಅಂಗಡಿಯಲ್ಲಿ ವ್ಯಾಪಾರ ಮಾಡಿದ್ದ 2 ಲಕ್ಷ 3 ಸಾವಿರ ರೂ.ಗಳನ್ನು ತನ್ನ ಜ್ಯುಪಿಟರ್ ಬೈಕ್‌ನ ಡಿಕ್ಕಿಯಲ್ಲಿ ಇಟ್ಟಿದ್ದಾರೆ. ನಂತರ ಅಂಗಡಿ ಎದುರಿನ ರಸ್ತೆಯ ರಾಘವೇಂದ್ರ ಮಾದಮಶೆಟ್ಟಿ ಅವರ ಹತ್ತಿರ ಮಾತನಾಡಲು ತೆರಳಿದ್ದಾರೆ. ಅದಾದ ನಂತರ ಮನೆಗೆ ಹೋಗಾದ ಡಿಕ್ಕಿಯಲ್ಲಿ ಹಣ ಇಲ್ಲದಿರುವುದು ಗಮನಕ್ಕೆ ಬಂದಿದೆ. ಕೂಡಲೇ ವಾಪಾಸ್ ಸುಪರ್ ಮಾರ್ಕೆಟ್‌ಗೆ ಆಗಮಿಸಿ ರಾಘವೇಂದ್ರ ಮಾದಮಶೆಟ್ಟಿ ಅವರ ಅಂಗಡಿಯಲ್ಲಿನ ಸಿಸಿ ಟಿವಿ ಕ್ಯಾಮೆರಾ ನೋಡಿದಾಗ, 25-30 ಇಬ್ಬರು ವ್ಯಕ್ತಿಗಳಿದ್ದು ಅದರಲ್ಲಿ ಒಬ್ಬ ಪುಟಪಾತ್ ಮೇಲೆ ನಮ್ಮನ್ನು ನೋಡುತ್ತ ನಿಂತಿದ್ದಾನೆ. ಇದೇ ವೇಳೆ ಇನ್ನೊಬ್ಬ ವ್ಯಕ್ತಿ ಗಾಡಿ ಡಿಕ್ಕಿಯಿಂದ ಹಣ ಕಳ್ಳತನ ಮಾಡುವುದು ಕಂಡು ಬಂದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.