ಜಿಲ್ಲೆ

ಬೈಕ್‌ಗೆ ಬೈಕ್ ಡಿಕ್ಕಿ; ಚಿಕಿತ್ಸೆಗೆ ಸ್ಪಂದಿಸದೆ ಓರ್ವ ಸಾವು

Haveri - Kariyappa Aralikatti

ಬ್ಯಾಡಗಿ: ಬೈಕ್‌ಗೆ ಮತ್ತೊಂದು ಬೈಕ್ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸ್ಥಳದಲ್ಲಿಯೆ ಮೃತಪಟ್ಟ ಘಟನೆ ತಾಲೂಕಿನ ಚಿಕ್ಕಬಾಸೂರ ರಸ್ತೆಯಲ್ಲಿ ಮಂಗಳವಾರ ಸಂಭವಿಸಿದೆ.
ಚಿಕ್ಕಬಾಸೂರ ಗ್ರಾಮದ ಮಹ್ಮದ ಜಿಕ್ರಿಯಾ ಮಹ್ಮದಗೌಸ ಸುಲೇಮಾನನವರ (48) ಮೃತ ಬೈಕ್ ಸವಾರ.
ಈತ ಚಿಕ್ಕಬಾಸೂರ ಕಡೆಯಿಂದ ಹಾವೇರಿ ಕಡೆಗೆ ಹೊರಟಿದ್ದ ಈತನಿಗೆ ಮತ್ತೊಂದು ಬೈಕ್ ಸವಾರ ಜೋರಾಗಿ ಬಂದು ಡಿಕ್ಕಿ ಹೊಡೆದಿದ್ದಾನೆ. ಇದರಿಂದ ಮಹ್ಮದ್ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಕಾಗಿನೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.