ಜಿಲ್ಲೆ

ಬೈಕ್‌ಗಳ ಮುಖಾಮುಖಿ ಡಿಕ್ಕಿ; ಹಿಂಬದಿ ಸವಾರ ಸಾವು

ಹಾಸನ: ನಗರದ ಬಿಟ್ಟಗೌಡನಹಳ್ಳಿ ಸಮೀಪ ದೇವೇಗೌಡನಗರ ಕ್ರಾಸ್ ಬಳಿ ಮಂಗಳವಾರ ಸಂಜೆ ಬೈಕ್‌ಗಳ ನಡುವೆ ಪರಸ್ಪರ ಡಿಕ್ಕಿ ಸಂಭವಿಸಿ ಬೈಕ್ ಹಿಂಬದಿ ಸವಾರ ಮೃತಪಟ್ಟಿದ್ದಾನೆ.
ಹಾಸನ ನಗರದ ರಂಗೋಲಿಹಳ್ಳದ ನಿವಾಸಿ ಜೀವನ್ ಜೋಸೆಫ್ (18) ಮೃತ ಯುವಕ.
ಜೋಸೆಫ್ ತನ್ನ ಸ್ನೇಹಿತನಾದ ಚೇತನ್ ಜತೆಗೆ ಬೈಕ್ ಹಿಂಬದಿ ಕುಳಿತು ಸಂಬಂಧಿಕರ ಮನೆಗೆ ಹೋಗುತ್ತಿದ್ದರು. ಈ ವೇಳೆ ಬಿಟ್ಟಗೌಡನಹಳ್ಳಿ ಸಮೀಪ ದೇವೇಗೌಡನಗರ ಕ್ರಾಸ್ ಬಳಿ ಎದುರಿನಿಂದ ಬಂದ ಮತ್ತೊಂದು ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿವೆ. ಡಿಕ್ಕಿಯಾದ ರಭಸಕ್ಕೆ ಜೀವನ್ ಜೋಸೆಫ್ ರಸ್ತೆಗೆ ಬಿದ್ದು ತಲೆಗೆ ಗಂಭೀರ ಗಾಯವಾಗಿದೆ. ಕೂಡಲೇ ಹಾಸನದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರೂ ಚಿಕತ್ಸೆ ಫಲಕಾರಿಯಾಗದೇ ಜೀವನ್ ಜೋಸೆಫ್ ಮೃತಪಟ್ಟಿರುತ್ತಾರೆ. ಹಾಸನ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.