ಕಲಬುರಗಿ: ಬೈಕ್ ಮೇಲೆ ಹೊರಟಿದ ಮಹಿಳೆಯ ಕೊರಳಲ್ಲಿ ಇದ್ದ ಸರವನ್ನು ಬೈಕ್ ಮೇಲೆಯೇ ಬಂದ ಆಗಂತುಕರು ಕಳ್ಳತನ ಮಾಡಿಕೊಂಡು ಹೋದ ಟನೆ ನಗರದಲ್ಲಿ ನಡೆದಿದೆ. ನಗರದ ಓಜಾ ಲೇಔಟ್ ನಿವಾಸಿ, ಶಿಕ್ಷಕಿ ಸುಮಾ ಭಗವತಿ ಅವರ ಸರ ಕಳ್ಳತನ ಮಾಡಲಾಗಿದೆ. ಬುಧವಾರ ರಾತ್ರಿ 9ಗಂಟೆ ವೇಳೆಗೆ ನಗರದ ಓಜಾ ಲೇಔಟ್ನ ಮನೆಗೆ ಹೋಗಲು ನ್ಯೂ ಜೇವರ್ಗಿ ರಸ್ತೆಯ ರೈಲ್ವೆಯ ಮೇಲ್ಸೇತುವೆ ಮೇಲೆ ಬೈಕ್ ಮೇಲೆ ಹೋಗುವಾಗ ಬೈಕ್ ಮೇಲೆ ಬಂದ ಇಬ್ಬರು ಆಗಂತುಕರು ಕೊರಳಿಗೆ ಕೈ ಹಾಕಿ, 75 ಸಾವಿರ ರೂ. ಮೌಲ್ಯದ 7.5 ಗ್ರಾಂ ಬಂಗಾರದ ಸರ ಕಿತ್ತುಕೊಂಡು ಹೋಗಿದ್ದಾರೆ. ಈ ಕುರಿತು ಸ್ಟೇಷನ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.