ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾದ ಕಾರ್ಮಿಕ ಸುರೇಶ್ 
ಜಿಲ್ಲೆ

ಬೈಕ್ ಸವಾರನಿಗೆ ಕಾಲು ಮುರಿತ

ರವಿಕುಮಾರ್ ಪಿ. ಕೆ

ಗೋಣಿಕೊಪ್ಪಲು: ಅಮ್ಮತಿಯಲ್ಲಿ ಶುಕ್ರವಾರ ಕಾಡಾನೆ ಕಂಡು ಗಾಬರಿಗೊಂಡ ಸವಾರ ಸಮೀಪದ ಕಂಬವೊಂದಕ್ಕೆ ಗುದ್ದಿದ ಪರಿಣಾಮ ಅವರ ಕಾಲು ಮುರಿದಿದೆ.

ಕಾರ್ಮಿಕ ಸುರೇಶ್ (35) ಕಾಲು ಮುರಿತಕ್ಕೆ ಒಳಗಾದವರು. ಮಧ್ಯಾಹ್ನ ತಮ್ಮ ಬೈಕ್‌ನಲ್ಲಿ ಅಮ್ಮತ್ತಿ ಸಮೀಪದ ಇಂಜಿಲಗೇರಿ ಬಳಿಯ ಪುಲಿಯೇರಿಯ ಕೆ.ಕೆ.ಅಯ್ಯಪ್ಪ ಎಂಬುವರ ಕಾಫಿ ತೋಟದ ಬಳಿ ಸಾಗುತ್ತಿದ್ದಾಗ ಕಾಡಾನೆ ಘೀಳಿಡುತ್ತ ರಭಸದಿಂದ ರಸ್ತೆ ಬಳಿಗೆ ಬಂದಿದೆ. ಈ ವೇಳೆ ಗಾಬರಿಗೊಂಡ ಸುರೇಶ್ ಸಮೀಪದ ಕಂಬಕ್ಕೆ ಗುದ್ದಿದ್ದಾರೆ. ಇದರಿಂದ ಕಾಲು ಮುರಿತವಾಗಿದೆ. ರಸ್ತೆ ಬದಿಯಲ್ಲಿ ಬಿದ್ದಿದ್ದನ್ನು ಗಮನಿಸಿದ ಕಾರ್ಮಿಕರು, ಸುರೇಶ್ ಅವರನ್ನು ಅಮ್ಮತ್ತಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ವಿಷಯ ತಿಳಿದ ಕೆಪಿಸಿಸಿ ರಾಜ್ಯ ವಕ್ತಾರ ಸಂಕೇತ್ ಪೂವಯ್ಯ, ಸ್ಥಳೀಯ ಕಾಂಗ್ರೆಸ್ ಮುಖಂಡರಾದ ಜಾನ್ ಸನ್, ಎಸ್.ಎಚ್.ಮತೀನ್ ಮತ್ತಿತರರು ಆಸ್ಪತ್ರೆಗೆ ತೆರಳಿ ಕಾರ್ಮಿಕನ ಆರೋಗ್ಯ ವಿಚಾರಿಸಿದರು.