ಜಿಲ್ಲೆ

ಬೈಕ್ ರ್ಯಾಲಿಗೆ ಶಾಸಕರಿಂದ ಚಾಲನೆ

Chitradurga - Desk - Pranav Kumar

ಚಿತ್ರದುರ್ಗ: ಕಾಂಗ್ರೆಸ್ ಬಲವರ್ಧನೆ, ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಪಕ್ಷದ ಕಾರ್ಯಕರ್ತರು, ಡಾ.ಬಿ.ತಿಪ್ಪೇಸ್ವಾಮಿ ಅಭಿಮಾನ ಬಳಗದಿಂದ ನಗರದಲ್ಲಿ ಗುರುವಾರ ನಡೆದ ಬೈಕ್ ರ್ಯಾಲಿಗೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಚಾಲನೆ ನೀಡಿದರು.

ನಂತರ ವೀರೇಂದ್ರ ಪಪ್ಪಿ ಮಾತನಾಡಿ, ಕೇಂದ್ರದಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ಅದಕ್ಕಾಗಿ ಕಾರ್ಯಕರ್ತರು ಈಗಿನಿಂದಲೇ ಶ್ರಮಿಸಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನಪರ ಯೋಜನೆಗಳಿಂದಾಗಿ ಉತ್ತಮ ಜನಾಭಿಪ್ರಾಯವಿದೆ. ಇದರಿಂದಾಗಿ ಚಿತ್ರದುರ್ಗ ಲೋಕಸಭಾ ಸೇರಿ 25 ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದರು.

ಕೆಪಿಸಿಸಿ ಸದಸ್ಯ ಡಾ.ಬಿ.ತಿಪ್ಪೇಸ್ವಾಮಿ ಜೆ.ಜೆ.ಹಟ್ಟಿ ಮಾತನಾಡಿ, ಜಿಲ್ಲೆಯಲ್ಲಿ ಸ್ಥಳೀಯ ನಾಯಕತ್ವಕ್ಕಾಗಿ ಅನೇಕ ಪ್ರಗತಿಪರ ಮತ್ತು ದಲಿತಪರ ಸಂಘಟನೆಗಳು ಹೋರಾಟ ನಡೆಸುತ್ತಿದ್ದು, ಸಾಮಾಜಿಕ ನ್ಯಾಯ ನೀಡುವ ಕಾಂಗ್ರೆಸ್ ಇದಕ್ಕೆ ಈ ಬಾರಿ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ಜಿಲ್ಲಾಧ್ಯಕ್ಷ ಎಂ.ಕೆ.ತಾಜ್‌ಪೀರ್, ಮುಖಂಡರಾದ ಡಿ.ಟಿ.ವೆಂಕಟೇಶ್, ಬಿ.ಟಿ.ಜಗದೀಶ್, ಚೌಳೂರು ಪ್ರಕಾಶ್, ಅಂಜಿನಪ್ಪ, ಲಕ್ಷ್ಮಿಕಾಂತ್, ಎಸ್.ಶ್ರೀರಾಮ್, ಅಶ್ವಕ್ ಅಲಿ, ಅನ್ನೀಸ್, ಏಜಾಜ್, ಇರ್ಫಾನ್ ಅಲಿ, ಹತಾವುಲ್ಲಾ, ಮುನ್ನಾ, ನೂರುಲ್ಲಾ, ಫಾರೂಕ್, ಮನ್ಜೂರು, ಅನಿಫ್, ನಯಾಜ್ ಇತರರಿದ್ದರು.