ರಾಮದುರ್ಗ: ಎರಡು ಬೈಕ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸ್ಥಳದಲ್ಲೇ ಮೃತಪಟ್ಟು, ಇಬ್ಬರು ಗಂಭೀರ ಗಾಯಗೊಂಡ ಟನೆ ತಾಲೂಕಿನ ಚಿಕ್ಕೊಪ್ಪ ಕೆ.ಎಸ್. ಗ್ರಾಮದಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದೆ.
ರಾಮದುರ್ಗ ಸಾರಿಗೆ ಟಕದಲ್ಲಿ ಬಸ್ ಚಾಲಕನಾದ ರವಿಶಂಕರ ಭೀಮರಾಯಪ್ಪ ಬೆಟಗೇರಿ (45) ಮೃತ. ಹಿಂಬದಿ ಸವಾರ ಕುಶಾಲ ದೇವೇಂದ್ರಪ್ಪ ಬಡಿಗೇರ (45) ಹಾಗೂ ಇನ್ನೊಂದು ಬೈಕ್ ಸವಾರ ಬಾಳಪ್ಪ ದೇಸಾಯಿ (28) ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂವರೂ ಚಿಕ್ಕೊಪ್ಪ ಗ್ರಾಮದವರು. ಈ ಕುರಿತು ಕಟಕೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.