ಜಿಲ್ಲೆ

ಬೈಕ್ ದುರಸ್ತಿ ಮಾಡಿಲ್ಲವೆಂದು ಶೋರೂಂಗೆ ಬೆಂಕಿ

ಕಲಬುರಗಿ: ಬೈಕ್ ಸರಿಯಾಗಿ ದುರಸ್ತಿ ಮಾಡಿಲ್ಲ ಎಂದು ಸಿಟ್ಟಾಗಿ ವ್ಯಕ್ತಿಯೊಬ್ಬ ನಗರದ ಹುಮನಾಬಾದ್ ವೃತ್ತದ ಬಳಿಯ ಮುಖ್ಯರಸ್ಥೆಯಲ್ಲಿನ ಎಲೆಕ್ಟಿçಕ್ ವಾಹನದ ಶೋರೂಂಗೆ ಪೆಟ್ರೋಲ್ ಸುರಿದು ಬೆಂಕಿ ಇಟ್ಟ ಚೌಕ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ನಡೆದಿದೆ. ನಗರದ ಮಹ್ಮದ್ ನದೀಮ್ ಆರೋಪಿ ಎಂದು ತಿಳಿದು ಬಂದಿದೆ. ಮಂಗಳವಾರ ಬೆಳಗ್ಗೆ ೧೦ಗಂಟೆ ಸುಮಾರಿಗೆ ಶೋರೂಂಗೆ ಆಗಮಿಸಿದ ಆರೋಪಿ ತನ್ನ ಎಲೆಕ್ಟಿçಕಲ್ ಬೈಕ್ ದುರಸ್ತಿ ಬಗ್ಗೆ ಸಿಬ್ಬಂದಿ ಜತೆ ವಾಗ್ವಾದ ನಡೆಸಿದ್ದು, ನಂತರ ಸಿಟ್ಟಾಗಿ ಶೋರೂಂನಲ್ಲಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಬೆಂಕಿಯ ಕೆನ್ನಾಲಿಗೆ ಬೈಕ್‌ಗಳು, ಸಾಮಗ್ರಿ ಸುಟ್ಟಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸ್ಥಳಕ್ಕೆ ಅಗ್ನಿಶಾಮಕ ದಳದ ವಾಹನಗಳು ಆಗಮಿಸಿ, ಬೆಂಕಿ ನಂದಿಸಿವೆ.
ಆರೋಪಿ ಬಂಧನ: ಶೋರೂಂಗೆ ಬೆಂಕಿ ಹಚ್ಚಿದ ಆರೋಪದಡಿ ಆರೋಪಿ ಮಹ್ಮದ್ ನದೀಮ್‌ನನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ. ತಿಳಿಸಿದ್ದಾರೆ.