ಹಾವೇರಿ: ರಸ್ತೆ ಬದಿಯಲ್ಲಿ ನಿಂತಿದ್ದ ಬಾಲಕಿಗೆ ಬೈಕ್ ಸವಾರ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದರಿಂದ ಬಾಲಕಿ ಗಾಯಗೊಂಡಿರುವ ಘಟನೆ ತಾಲೂಕಿನ ವರದಾಹಳ್ಳಿ ಗ್ರಾಮದಲ್ಲಿ ನಡೆದಿದೆ.
ವರದಾಹಳ್ಳಿಯ ವೈಷ್ಣವಿ ಸೂರದ ಗಾಯಗೊಂಡವಳು.
ಬಾಲಕಿ ಶ್ರೀ ಆಲದಮ್ಮ ದೇವಸ್ಥಾನದ ಹತ್ತಿರ ರಸ್ತೆ ಬದಿಯಲ್ಲಿ ನಿಂತುಕೊಂಡಿದ್ದಳು. ಅದೇ ಗ್ರಾಮದ ಆರೋಪಿತ ಮಂಜುನಾಥಗೌಡ ಧರ್ಮಗೌಡ ವಡಕನಗೌಡ್ರ ಎಂಬ ಬೈಕ್ ಸವಾರ ಅತೀ ವೇಗವಾಗಿ ಬೈಕ್ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದು ಅಪಘಾತಪಡಿಸಿದ್ದಾನೆ ಎಂದು ಬಾಲಕಿ ತಾಯಿ ಶೈಲಾ ಸೂರದ ದೂರು ದಾಖಲಿಸಿದ್ದಾರೆ. ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.