ಕಲಬುರಗಿ: ಬೈಕ್ ಡಿಕ್ಕಿಯಲ್ಲಿಟ್ಟಿದ್ದ ೨.೫೦ ಲಕ್ಷ ರೂ. ಕಳ್ಳತನ ಮಾಡಿದ ಟನೆ ನಗರದ ಗಣೇಶ ನಗರದಲ್ಲಿ ನಡೆದಿದೆ. ಉಪನ್ಯಾಸಕ ಬಸಯ್ಯ ಮಠ ಹಣ ಕಳೆದುಕೊಂಡವರು. ಬ್ಯಾಂಕ್ನಲ್ಲಿ ಜಮಾ ಮಾಡಲು ಸಾಲ ತಂದಿದ್ದ ಹಣವನ್ನು ಬೈಕ್ ಡಿಕ್ಕಿಯಲ್ಲಿಟ್ಟು ತಮ್ಮ ಕೋಚಿಂಗ್ ಸೆಂಟರ್ಗೆ ತೆರಳಿದ್ದು, ಒಂದು ಗಂಟೆ ನಂತರ ಬೈಕ್ ಬಳಿ ಬಂದಾಗ ಡಿಕ್ಕಿ ತೆರೆದಿದ್ದು, ಒಳಗಿದ್ದ ಹಣ ಕಾಣಿಸಿಲ್ಲ. ಯಾರೋ ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎಂದು ಎಂ.ಬಿ.ನಗರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.