ಜಿಲ್ಲೆ

ಬೈಕ್ ಡಿಕ್ಕಿ, ಸ್ಕೂಟರ್ ಸವಾರ

ಮೈಸೂರು: ಮೈಸೂರು- ನಂಜನಗೂಡು ರಸ್ತೆಯ ಕಡಕೊಳ ಬಳಿ ಬೈಕ್ ಹಾಗೂ ಸ್ಕೂಟರ್ ಡಿಕ್ಕಿಯಿಂದಾಗಿ ಸ್ಕೂಟರ್ ಸವಾರ ಮೃತಪಟ್ಟಿದ್ದಾರೆ.

ಕಡಕೊಳ ಗ್ರಾಮದ ಶಿವಕುಮಾರ್(30) ಮೃತರು. ಊಟ ತರಲೆಂದು ರಾತ್ರಿ 10 ಗಂಟೆ ವೇಳೆ ಇವರು ಸ್ನೇಹಿತನೊಡನೆ ಮನೆಯಿಂದ ಡಾಬಾಕ್ಕೆ ಹೋಗಿದ್ದಾರೆ.

ಈ ಸಂದರ್ಭದಲ್ಲಿ ಟಿವಿಎಸ್ ಕಾರ್ಖಾನೆ ಸರ್ಕಲ್ ಬಳಿ ವೇಗವಾಗಿ ಬಂದ ಬೈಕ್, ಸ್ಕೂಟರ್‌ಗೆ ಡಿಕ್ಕಿ ಹೊಡೆದಿದ್ದರಿಂದ ಈ ದುರಂತ ನಡೆದಿದೆ.

ಮೈಸೂರು ದಕ್ಷಿಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.