ಮೈಸೂರು: ಬೈಕ್ ಕಳ್ಳನನ್ನು ಬಂಧಿಸಿರುವ ಜಯಲಕ್ಷ್ಮೀಪುರಂ ಠಾಣೆ ಪೊಲೀಸರು, ಆತನಿಂದ 2.05 ಲಕ್ಷ ರೂ.ಮೊತ್ತದ 3 ಬೈಕ್ ಜಪ್ತಿ ಮಾಡಿದ್ದಾರೆ.
ನಗರದ ಹುಣಸೂರು ರಸ್ತೆಯ ಬಿ.ಎಂ.ಆಸ್ಪತ್ರೆಯ ಬಳಿರುವ ಉದ್ಯಾನದ ಕಡೆ ಪಾರ್ಕಿಂಗ್ ಮಾಡಿದ್ದ ವಾಹನಗಳನ್ನು ನೋಡಿಕೊಂಡು ಅನುಮಾನಾಸ್ಪದವಾಗಿ ವ್ಯಕ್ತಿಯೊಬ್ಬ ತಿರುಗಾಡುತ್ತಿದ್ದ.
ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಬೈಕ್ ಕಳ್ಳತನ ನಡೆಸಿರುವುದು ಪತ್ತೆಯಾಗಿದೆ.
ಈತನ ಬಂಧನದಿಂದ ಜಯಲಕ್ಷ್ಮೀಪುರಂ ಠಾಣೆಯ 2 ಮತ್ತು ದಕ್ಷಿಣ ಠಾಣೆಯ 1 ಪ್ರಕರಣ ಪತ್ತೆಯಾಗಿದೆ.