ಬಾಗಲಕೋಟೆ: ಉತ್ತರ ಕರ್ನಾಟಕದ ಭಾಗದ ನಾನಾ ಜಿಲ್ಲೆಗಳಲ್ಲಿ ಬೈಕ್‌ಗಳನ್ನು ಕದ್ದು ಬೇರೆಡೆ ಕಡಿಮೆ ಬೆಲೆ ಮಾರಾಟ ಮಾಡುತ್ತಿದ್ದ ಇಬ್ಬರು ಕಳ್ಳರನ್ನು ಬಂಽಸಲಾಗಿದೆ. ಬಂಧಿತರಿಂದ ೫.೮೫ ಲಕ್ಷ ರೂ. ಮೊತ್ತದ ೧೧ ಬೈಕ್‌ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಹೆಚ್ಚುವರಿ ಎಸ್ಪಿ ಪ್ರಸನ್ನ ದೇಸಾಯಿ ಹೇಳಿದರು.
ನಗರದ ಬಾಗಲಕೋಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳ್ಳತನ ಮಾಡಿದ ಆರೋಪಿತರಲ್ಲಿ ಬಾಗಲಕೋಟೆ ತಾಲೂಕಿನ ಸಂಗಾಪುರದ ಗೋಪಾಲ ಗುರುರಾಜ ಕುರಿತ, ಬೇವೂರಿನ ಸಚಿನ್ನ ವಿಠ್ಠಲಗೌಡ ಪಾಟೀಲ ಬಂಧಿಸಲಾಗಿದೆ. ಇವರು ಸಂಬಂಧದಲ್ಲಿ ಮಾವ-ಅಳಿಯ ಆಗಿದ್ದು, ಕದ್ದ ಬೈಕ್‌ಗಳನ್ನು ಕಡಿಮೆ ಬೆಲೆಗೆ ಬೇರೊಬ್ಬರಿಗೆ ಮಾರಾಟ ಮಾಡುತ್ತಿದ್ದರು. ಈ ವೇಳೆ ಬೈಕ್‌ನ ದಾಖಲೆಗಳು ಮನೆಯಲ್ಲಿದ್ದು, ನಂತರ ನೀಡುತ್ತೇವೆ ಅಂತ ವಂಚಿಸುತ್ತಿದ್ದರು ಎಂದು ಹೇಳಿದರು.
ಬಂಧಿತರಿಂದ ೫ ಎಚ್.ಎಫ್ ಡಿಲಕ್ಸ್, ೪ ಸ್ಪೇಂಡರ್ ಬೈಕ್ ಹಾಗೂ ಎರಡು ಬಜಾಜ ಪಲ್ಸರ್ ಬೈಕ್ ಸೇರಿ ಒಟ್ಟು ೧೧ ಬೈಕಗಳು ವಶಪಡಿಸಿಕೊಂಡಿದ್ದು, ಒಟ್ಟು ೫.೫೮ ಲಕ್ಷ ರೂ. ಮೌಲ್ಯ ಹೊಂದಿವೆ. ೨೦೨೨ ಡಿ.೨೭ ರಂದು ಬಾಗಲಕೋಟೆ ತಾಲೂಕಿನ ಭಗವತಿ ಗ್ರಾಮದ ಮುತ್ತಪ್ಪ ಯಲ್ಲಪ್ಪ ಕಂಬಾರ ಅವರು ತಮ್ಮ ಮನೆಯ ಎದರು ನಿಲ್ಲಿಸಿದ್ದ ಬೈಕ್ ಕಳ್ಳತನವಾಗಿದ್ದು, ವ್ಯಕ್ತಿಯೊಬ್ಬರು ಆ ಬೈಕ್ ಪಡೆದಿದ್ದಾರೆ ಎಂಬ ಅನುಮಾನಾಸ್ಪದ ವ್ಯಕ್ತಿಯ ಹೆಸರು ನಮೂದಿಸಿ ದೂರು ನೀಡಿದ್ದರು. ಈ ದೂರಿನ ಜಾಡು ಹಿಡಿದು ತನಿಖೆ ಕೈಗೊಂಡ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ ಎಂದು ತಿಳಿಸಿದರು.
ಬಾಗಲಕೋಟೆ ಗ್ರಾಮೀಣ ಠಾಣೆಯ ಸಿಪಿಐ ಎಚ್.ಆರ್. ಪಾಟೀಲ ಅವರ ನೇತೃತ್ವದಲ್ಲಿ ಪಿಎಸ್‌ಐ ಶರಣಬಸಪ್ಪ ಸಂಗಳದ, ಎಎಸ್‌ಐ ಆರ್.ಡಿ.ಲಮಾಣಿ, ಎಚ್‌ಸಿ ಡಿ.ಸಿ. ಗುಡ್ಡಳ್ಳಿ, ಪೇದೆಗಳಾದ ಆರ್.ಎಂ. ಕುಲಕರ್ಣಿ, ಪಿ.ಎಸ್. ಪಾಟೀಲ, ಆರ್.ಎ. ನದಾಫ, ಎಸ್.ಎಸ್. ಸೊನ್ನದ, ಎಸ್.ಪಿ. ಹಳೇಮನಿ ಹಾಗೂ ಮಹಿಳಾ ಪೊಲೀಸ್ ಠಾಣೆಯ ಪಿಸಿ ಮುತ್ತು ಅಜಮನಿ ಅವರು ಒಳಗೊಂಡ ತಂಡ, ಬೈಕ್ ಕಳ್ಳರ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಈ ಎಲ್ಲ ಸಿಬ್ಬಂದಿಗೆ ಎಸ್ಪಿ ಅಮರನಾಥ ರಡ್ಡಿ ವಿಶೇಷ ಬಹುಮಾನ ಘೋಷಿಸಿದ್ದಾರೆ ಎಂದು ಹೇಳಿದರು.
ಡಿವೈಎಸ್ಪಿ ಪಂಪನಗೌಡ, ಸಿಪಿಐ ಎಚ್.ಆರ್.ಪಾಟೀಲ, ಗ್ರಾಮೀಣ ಪಿಎಸ್‌ಐ ಶರಣಬಸಪ್ಪ ಸಂಗಳದ, ಅಪರಾಧ ವಿಭಾಗದ ಪಿಎಸ್‌ಐ ಆರ್.ಡಿ. ಲಮಾಣಿ ಇದ್ದರು.