ಜಿಲ್ಲೆ

ಬೈಕ್ ಅಪಘಾತ ಬಿಎಂಟಿಸಿ ಚಾಲಕ ದುರ್ಮರಣ


ಕಲಬುರಗಿ : ನಗರದ ಡಬರಾಬಾದ ಕ್ರಾಸ್ ಹತ್ತಿರದಲ್ಲಿ ಭಾನುವಾರ  ಬೈಕ್‌ವೊಂದು ಕುದುರೆಗೆ ಡಿಕ್ಕಿ ಹೊಡೆದು  ಬಿದ್ದು ಗಂಭೀರವಾಗಿ ಗಾಯಗೊಂಡು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.
ಮಲ್ಲಿನಾಥ ಎಂಬುವರೇ ಮೃತಪಟ್ಟವರು. ಆಳಂದ ತಾಲೂಕಿನ ಹಿತ್ತಲಶಿರೂರ ಗ್ರಾಮದವರು. ಬೆಂಗಳೂರಿನಲ್ಲಿ ಬಿಎಂಟಿಸಿಯಲ್ಲಿ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದರು. ಹಿತ್ತಲಶಿರೂರ ಗ್ರಾಪಂ ಚುನಾವಣೆಯಲ್ಲಿ ಮತದಾನ ಮಾಡಲು ಪತ್ನಿ ದೊಡ್ಡಮ್ಮ ಜತೆಗೂಡಿ ಊರಿಗೆ ಬಂದ್ದು, ಮತ ಚಲಾಯಿಸಿದ್ದರು.
ಮಾರನೇ ದಿನ ಮರಳಿ ಬೆಂಗಳೂರಿಗೆ ಕರ್ತವ್ಯಕ್ಕೆ ಹೋಗಲು ಬೈಕ್ ಮೇಲೆ ಊರಿನಿಂದ ಕಲಬುರಗಿ ಕಡೆಗೆ ಬರುವಾಗ ಅವಘಡ ಸಂಭವಿಸಿದೆ. ಸಂಚಾರ ಠಾಣೆ-೨ರಲ್ಲಿ ಪ್ರಕರಣ ದಾಖಲಾಗಿದೆ.