ಜಿಲ್ಲೆ

ಬೇಸಿಗೆ ಶಿಬಿರ ಮುಕ್ತಾರ

ಹೊಳೆನರಸೀಪುರ: ಪಟ್ಟಣದ ಸ್ಕೌಟ್ಸ್ ಮತ್ತು ಗೈಡ್ಸ್, ರೋಟರಿ ಸಂಸ್ಥೆ ಹಾಗೂ ವೈಷ್ಣವಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಕೊನೇರಿ ರಾಮಶೆಟ್ಟರ ಛತ್ರದಲ್ಲಿ ಆಯೋಜಿಸಿದ್ದ 5 ದಿನಗಳ ಮಕ್ಕಳ ಬೇಸಿಗೆ ಶಿಬಿರ ಶನಿವಾರ ಮುಕ್ತಾಯವಾಯಿತು.

ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಕುಮಾದಾ ಮಾತನಾಡಿ, ಶಿಬಿರದಲ್ಲಿ ಮಕ್ಕಳ ಮನೋವಿಕಾಸಕ್ಕೆ ಸಹಕಾರಿಯಾಗುವ ಅನೇಕ ತರಬೇತಿಗಳನ್ನು ನೀಡಿದ್ದೇವೆ. ವೈದಿಕ್ ಗಣಿತ, ಅಬಾಕಸ್, ಯೋಗ, ಪ್ರಾಣಾಯಾಮ, ನೃತ್ತ, ಸಂಗೀತ ಕಲೆಗಳ ಬಗ್ಗೆ ತಜ್ಞರಿಂದ ತರಬೇತಿ ಕೊಡಿಸಲಾಗಿದೆ. ಶಿಬಿರದಲ್ಲಿ ಭಾಗವಹಿಸಿದ್ದ ಮಕ್ಕಳು ಶಿಬಿರದಲ್ಲಿ ಅತ್ಯಂತ ಆಸಕ್ತಿಯಿಂದ ಭಾಗವಹಿಸಿ ಕಲಿತಿದ್ದಾರೆ ಎಂದರು.

ರೋಟರಿ ಸಂಸ್ಥೆಯ ಅಧ್ಯಕ್ಷ ರೇಣುಕೇಶ್ ಮಾತನಾಡಿ, ಮಕ್ಕಳು ಶಾಲಾ ಅವದಿಯಲ್ಲಿ ಪುಸ್ತಕದ ಜತೆಯಲ್ಲೇ ಇರುತ್ತಾರೆ. ಈ ಶಿಬಿರದಲ್ಲಿ ಪುಸ್ತಕದಲ್ಲಿ ಇಲ್ಲದ ವಿಷಯಗಳ ಬಗ್ಗೆ ತಿಳಿಸಿಕೊಟ್ಟು ಮಕ್ಕಳ ಆಸಕ್ತಿಯನ್ನು ಹೆಚ್ಚಿಸಲಾಗಿದೆ ಎಂದರು.

ಕ್ರೀಡೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು. ಪುರಸಭೆ ಉಪಾಧ್ಯಕ್ಷೆ ತ್ರಿಲೋಚನಾ, ಸದಸ್ಯ ಎ.ಜಗನ್ನಾಥ್, ರೋಟರಿ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಮಂಜುನಾಥ್, ಭಾರತ್ ಸೇವಾದಳದ ಶಂಕರ್ ನಾರಾಯಣ್ ಏತಾಳ್, ರಾಮದಾಸ್, ವೈಷ್ಣವಿ ಚಾರಿಟಬಲ್ ಟ್ರಸ್ಟಿನ ಕಿಟ್ಟಿ, ಮಂಜುಳಾ, ರವೀಶ್, ಯೋಗಶಿಕ್ಷಕಿ ಪ್ರೇಮಾ ಮಂಜುನಾಥ್, ಜೆಸಿ ಸಂಸ್ಥೆಯ ತರಬೇತುದಾರ ಸುರೇಶ್ ಕುಮಾರ್, ವಿನೋದ್, ಮುಖಂಡರಾದ ಅಶೋಕ್, ಶಿವಕುಮಾರ್, ಭಾರತಿ ಇತರರು ಭಾಗವಹಿಸಿದ್ದರು.