ಕಲಬುರಗಿ: ದಾಲ ಮಿಲ್‌ನಿಂದ ತೊಗರಿ ಖರೀದಿಸಿ ಹಣ ನೀಡದೆ ೨೭.೮೭ ಲಕ್ಷ ರೂ. ಮೋಸ ಮಾಡಿದ ಘಟನೆ ನಡೆದಿದೆ. ಸೇಡಂ ನಿವಾಸಿ ಪ್ರಕಾಶ ಹೆಡ್ಡಾ ವಿರುದ್ಧ ಕೇಸ್ ದಾಖಲಾಗಿದೆ. ನೆಹರು ಗಂಜ್ ನಿವಾಸಿ ಗಿರೀಶ ಗಿಲ್ಡಾ ಮೋಸ ಹೋದವರು. ಗಿರೀಶ ಗಿಲ್ಡಾ ಅವರ ಕಪನೂರ ಇಂಡಸ್ಟಿçÃಯಲ್ ಪ್ರದೇಶದಲ್ಲಿ ದಾಲಮಿಲ್ ಹೊಂದಿದ್ದಾರೆ. ನಾಲ್ಕೆÊದು ವರ್ಷದಿಂದ ಪರಿಚಯ ಇರುವ ವ್ಯಾಪಾರಿ ಪ್ರಕಾಶ ತೊಗರಿ ಬ್ಯಾಳಿ ಬೇಕಾಗಿವೆ. ದಾಲ್ ಮೀಲ್‌ನಲ್ಲಿರುವ ತೊಗರಿ ಬೇಳೆ ನೀಡಿ, ಒಂದು ತಿಂಗಳಲ್ಲಿ ಹಣ ಕೊಡಿಸುತ್ತೇನೆ ಎಂದು ಕೇಳಿದ್ದರೂ, ನೀಡಿರುವುದಿಲ್ಲ. ಆದರೆ ಸಂಬAಧಿಕ ಸತೀಶಕುಮಾರ ಅವರಿಂದ ದೂರವಾಣಿ ಕಾನ್ಫರೆನ್ಸ್ ಮೂಲಕ ನಂಬಿಸಿದ್ದಾರೆ. ಹಂತ ಹಂತವಾಗಿ ೩೨.೩೮ ಲಕ್ಷ ರೂ.ಮೌಲ್ಯದ ೨೧೦ ಕ್ವಿಂಟಾಲ್ ತೊಗರಿ ಬ್ಯಾಳಿ ತೆಗೆದುಕೊಂಡು ಹೋಗಿದ್ದಾರೆ. ಅದರಲ್ಲಿ ೫ ಲಕ್ಷ ರೂ. ನೀಡಿದ್ದು, ಬಾಕಿ ಹಣ ನೀಡದೆ ಮೋಸ ಮಾಡಿದ್ದಾರೆ ಎಂದು ಸಬ್‌ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.