ಹಾಸನ: ಬೇಲೂರು ತಾಲೂಕಿನ ಅಡಗೂರು ಹತ್ತಿರದ ಸಂಪಿಗೆ ಮರದ ಕೊಪ್ಪಲಿನಲ್ಲಿ ರಾಜ್ಯಸಭಾ ಮಾಜಿ ಸದಸ್ಯ ಎಚ್.ಕೆ. ಜವರೇಗೌಡ, ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಜಾವಗಲ್ ಮಂಜುನಾಥ್, ಜಿಲ್ಲಾದ್ಯಕ್ಷರಾದ ಈ.ಎಚ್. ಲಕ್ಷ್ಮಣ್, ಜಿಲ್ಲಾಧ್ಯಕ್ಷ ಈ.ಎಚ್. ಕೃಷ್ಣೇಗೌಡ ಸೇರಿದಂತೆ ಕಾಂಗ್ರೆಸ್ ಮುಖಂಡರು ಪಕ್ಷದ ಅಭ್ಯರ್ಥಿ ಶ್ರೇಯಸ್ ಪಟೇಲ್ ಪರ ಪ್ರಚಾರ ನಡೆಸಿದರು.
ದಾಸಗೋಡನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಾಜಣ್ಣ ಹಾಗೂ ಗ್ರಾಮಸ್ಥರು ಸಭೆ ಸೇರಿ ಕಾಂಗ್ರೆಸ್ ಪರ ಮತ ಹಾಕುವುದಾಗಿ ಮತ್ತು ಪ್ರಚಾರ ಮಾಡುವುದಾಗಿ ಹೇಳಿದರು. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರನ್ನು ಗೌರವಿಸಲಾಯಿತು. ಜಿಲ್ಲೆಯ ಅಡಗೂರಿನ ಗ್ರಾಮ ದೇವತೆ ಕರಡಿ ಲಕ್ಕಮ್ಮ ದೇವಸ್ಥಾನದಲ್ಲಿ ಗ್ರಾಮದ ಮುಖಂಡರು ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ಶ್ರೇಯಸ್ ಪಟೇಲ್‌ಗೆ ಜಯ ಲಭಿಸಲೆಂದು ಪೂಜೆ ಸಲ್ಲಿಸಿದರು. ಇದೆ ವೇಳೆ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಜಾರಿಗೆ ತಂದ 5 ಗ್ಯಾರಂಟಿಗಳನ್ನು ಜನ ಮುಂದೆ ಇಟ್ಟು ಗಮನಸೆಳೆದರು.