ಮಹಾಲಿಂಗಪುರ ಸಮೀಪದ ಮದಭಾಂವಿ ಗ್ರಾಮದಲ್ಲಿ ವೀರ ರಾಣಿ ಚನ್ನಮ್ಮಳ ಬೃಹತ್ ಗಾತ್ರದ ಮೂರ್ತಿ ಅನಾವರಣಗೊಳಿಸಲಾಯಿತು. ಜಗದ್ಗುರು ಬಸವಜಯ ಮೃತ್ಯಂಜಯ ಸ್ವಾಮೀಜಿ, ಡಾ.ಪುರುಷೋತ್ತಮಾನಂದ ಪುರಿ ಸ್ವಾಮೀಜಿ, ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ಸಿದ್ದು ಸವದಿ, ವಿ.ಪ ಸದಸ್ಯ ಹಣಮಂತ ನಿರಾಣಿ, ಚನ್ನಮ್ಮ ಸಮಿತಿ ಅಧ್ಯಕ್ಷ ಸದಾಶಿವ ಪಟ್ಟಣಶೆಟ್ಟಿ, ಮುಖಂಡರಾದ ಸಿದ್ದು ಕೊಣ್ಣೂರ, ಮಹಾಂತೇಶ ಹಿಟ್ಟಿನಮಠ, ಮಹಾಂತೇಶ ಉರಬಿನ್ನವರ, ಪವನ ಕತ್ತಿ ಇದ್ದರು.  
ಜಿಲ್ಲೆ

ಬೇರೆಯವರ ರೊಟ್ಟಿ ಕಸಿದು ಕೊಳ್ಳುವದಿಲ್ಲ

ಸಂತೋಷ ದೇಶಪಾಂಡೆ

ಬಾಗಲಕೋಟೆ:  ಸಂವಿಧಾನಾತ್ಮಕವಾಗಿ ಮೀಸಲಾತಿ ಪಡೆದುಕೊಂಡ ಎಲ್ಲ ಸಮುದಾಯಗಳಂತೆ ನಮ್ಮ ಸಮಾಜದ ಮಕ್ಕಳಿಗೂ ಸೌಲಭ್ಯ ದೊರಯಬೇಕು ಎನ್ನುವ ಆಶಯವಿದೆ. ರೊಟ್ಟಿ ಕಸಿದುಕೊಳ್ಳುವ ಸಮಾಜ ಪಂಚಮಸಾಲಿ ಸಮಾಜ ಅಲ್ಲ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಮಹಾಲಿಂಗಪುರ ಸಮೀಪದ ಮದಭಾಂವಿ ಗ್ರಾಮದಲ್ಲಿ ರಾಣಿ ಚನ್ನಮ್ಮ ಸಮಿತಿ ಹಾಗೂ ರಬಕವಿ-ಬನಹಟ್ಟಿ ತಾಲೂಕು ಪಂಚಮಸಾಲಿ ಸಮಾಜದ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವೀರರಾಣಿ ಕಿತ್ತೂರು ಚನ್ನಮ್ಮ ಜಯಂತೋತ್ಸವ, ವಿಜಯೋತ್ಸವ ಹಾಗೂ ಕಂಚಿನ ಮೂರ್ತಿ ಅನಾವರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಎಲ್ಲರಿಗೂ ಸುರಕ್ಷತೆ ಎಂದರೆ ಸನಾತನ ಧರ್ಮ. ಅದು ನಮ್ಮ ಕೇಸರಿ ಧರ್ಮ, ಬುದ್ಧ ಬಸವ ಅಂಬೇಡ್ಕರ ಸೇರಿದಂತೆ ಅನೇಕ ಜನ ಮಹನೀಯರು ಸಮಾಜ ಸುಧಾರಣೆಗೆ ಶ್ರಮಿಸಿದ್ದಾರೆ. ಅಸ್ಪÈಶ್ಯತೆ ವಿರುದ್ಧ ಹೋರಾಟ ಮಾಡಿದ್ದಾರೆ. ಶಿಕ್ಷಣಕ್ಕಾಗಿ ತಮ್ಮ ಜೀವನ ಮುಡುಪಾಗಿಟ್ಟಿದ್ದಾರೆ. ಡಾ.ಬಾಬಾಸಾಹೇಬ ಅಂಬೇಡ್ಕರ ಅವರ ಶಕ್ತಿಯ ಪರಿಣಾಮ ಸಂವಿಧಾನ ಮೂಲಕ ದೇಶದಲ್ಲಿ ಸಮಾನತೆ ಬರಲು ಕಾರಣವಾಯಿತು ಎಂದರು.

ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಜಯಮೃತ್ಯುಂಜಯ ಸ್ವಾಮೀಜಿ ಅವರನ್ನು ಪೀಠದಿಂದ ಉಚ್ಛಾಟಿಸಲು ಅಽಕಾರ ಯಾರಿಗೂ ಇಲ್ಲ. ಉಚ್ಛಾಟನೆ ಎನ್ನುವ ಪದವೇ ಬೇಡ. ಭಾಷಣದಿಂದ ಮೀಸಲಾತಿ ದೊರೆಯುವದಿಲ್ಲ. ವಾಲ್ಮೀಕಿ, ಹಾಲುಮತ ಸಮಾಜ ಕೂಡಾ ಮೀಸಲಾತಿಗಾಗಿ ವಿಧಾನಸೌಧದಲ್ಲಿ ಹೋರಾಟ ಮಾಡಿವೆ ಎಂದು ತಿಳಿಸಿದರು.

ಹೊಸದುರ್ಗ ಭಗೀರಥ ಪೀಠದ ಡಾ.ಪುರುಷೋತ್ತಮಾನಂದ ಪುರಿ ಸ್ವಾಮೀಜಿ, ಕೌಲಗುಡ್ಡದ ಸಿದ್ಧಯೋಗಿ ಅಮರೇಶ್ವರ ಸ್ವಾಮೀಜಿ, ಅರ್ಚಕ ನಾಗಯ್ಯ ಮಠಪತಿ ಸಾನ್ನಿಧ್ಯ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ಕಾರ್ಯಕ್ರಮ ಉದ್ಘಾಟಿಸಿದರು. ಕಿಸಾನ ಕಾಂಗ್ರೆಸ್ ರಾಜ್ಯ ಸಂಚಾಲಕ ಸಿದ್ದು ಕೊಣ್ಣೂರ, ಜಿಪಂ ಮಾಜಿ ಸದಸ್ಯ ಮಹಾಂತೇಶ ಹಿಟ್ಟಿನಮಠ, ಎಎಪಿ ಪಕ್ಷದ ಅರ್ಜುನ ಹಲಗಿಗೌಡರ, ಮಹಾಂತೇಶ ಉರಬಿನ್ನವರ, ಚನ್ನಮ್ಮ ಸಮಿತಿ ಅಧ್ಯಕ್ಷ ಸದಾಶಿವ ಪಟ್ಟಣಶೆಟ್ಟಿ, ಪವನ ಕತ್ತಿ, ಗ್ರಾಪಂ ಅಧ್ಯಕ್ಷ ಬಸವರಾಜ ನಾಗನೂರ, ಕೆಎಂಎಫ್ ನಿರ್ದೇಶಕ ಲಕ್ಕಪ್ಪ ಪಾಟೀಲ, ಮಹಾದೇವ ಮಾರಾಪುರ, ಸಿದ್ದುಗೌಡ ಪಾಟೀಲ ಇತರರು ಇದ್ದರು.