ಜೆ.ಜಿ. ಶ್ರೀನಿವಾಸಮೂರ್ತಿ ಬೇತಮಂಗಲ
ಅಂಗನವಾಡಿ ಕೇಂದ್ರಗಳಲ್ಲಿ ವಿತರಿಸಬೇಕಾದ ಪುಷ್ಟಿ ಆಹಾರ ಪೊಟ್ಟಣ ಚಿಲ್ಲರೆ ಅಂಗಡಿಯಲ್ಲಿ ಮಾರಾಟವಾಗುತ್ತಿರುವ ದೂರಿನ ಮೇರೆಗೆ ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿ 600 ಕೆಜಿಯ 150 ಪೊಟ್ಟಣಗಳನ್ನು ವಶಪಡಿಸಿಕೊಂಡಿದ್ದಾರೆ. ಹಳೇ ಬಡಾವಣೆಯ ಲ್ಮನಾರಾಯಣ ಎಂಬುವವರು ಮಾರಾಟ ಮಾಡುತ್ತಿದ್ದ ಬಗ್ಗೆ ಅಂಬೇಡ್ಕರ್ ವೀರಸೇನೆ ಅಧ್ಯ ಭಟ್ರಕುಪ್ಪ ಅರುಣ್ ಮತ್ತು ಬಂಗಾರಪೇಟೆ ಅಧ್ಯ ರವಿಕುಮಾರ್ ಎಂಬುವವರು ತಣ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಬಂದ ಸಿಡಿಪಿಒ ನಾಗರತ್ನಮ್ಮಮತ್ತು ಬೇತಮಂಗಲ ವೃತ್ತ ಅಂಗನವಾಡಿ ಮೇಲ್ವಿಚಾರಕಿ ವಿನೋದಾ ಅವರು ಗೋದಾಮು ಮೇಲೆ ದಾಳಿ ನಡೆಸಿದ್ದಾರೆ.
ಏನಿದು ಪುಷ್ಟಿ ಆಹಾರ: ಅಂಗನವಾಡಿ ಕೇಂದ್ರಗಳಲ್ಲಿ ಪ್ರತಿ ಮಗುವಿಗೂ ತಿಂಗಳಿಗೊಮ್ಮೆ 250 ಗ್ರಾಂ ತೂಕದ ಪುಷ್ಟಿ ಎಂಬ ಆಹಾರದ ಪೊಟ್ಟಣ ನೀಡಲಾಗುತ್ತದೆ. ಇದರಲ್ಲಿ ಕಡಲೆಬೀಜ, ಗೋಧಿ, ರಾಗಿ, ಹೆಸರುಬೇಳೆ ಸೇರಿದಂತೆ ಪೊಟೀನ್ಯುಕ್ತ ಆಹಾರದ ಮಿಶ್ರಣ ಇರುತ್ತದೆ. ಇಲ್ಲಿ ಸಿಕ್ಕಿರುವ 150 ಪ್ಯಾಕೆಟ್ಗಳ ಪೈಕಿ ಅರ್ಧದಷ್ಟು ಅವಧಿ ಮುಕ್ತಾಯವಾಗಿವೆ. ಇನ್ನುಳಿದಂತೆ ಮಾರ್ಚ್ 23ರ ವರೆಗೂ ವಿತರಣೆ ಮಾಡಬಹುದಾದ ಆಹಾರ ಪೊಟ್ಟಣಗಳು ಅಂಗಡಿಗೆ ಹೇಗೆ ಬಂದವು ಎನ್ನುವುದು ಕುತೂಹಲ ಮೂಡಿಸಿದೆ.
ಬೇತಮಂಗಲಕ್ಕೆ ಹೇಗೆ ಬಂತು: ಬೇತಮಂಗಲದ ಅಂಗಡಿಯಲ್ಲಿ ಸಿಕ್ಕಿದೆಯಾದರೂ ಇವು ಕೋಲಾರ ತಾಲೂಕಿಗೆ ಸೇರಿದ್ದಾಗಿದೆ. ಪೊಟ್ಟಣದ ಮೇಲೆ ತಯಾರಕರು ಎಂಎಸ್ಪಿಸಿ, ಮಹಿಳಾ ಪೂರಕ ಪೌಷ್ಟಿಕ ಆಹಾರ ತಯಾರಿಕಾ ಟಕ ವಿದ್ಯಾಜ್ಯೋತಿ ಶಾಲೆ ಹಿಂಭಾಗ ಕಳ್ಳಿಪುರ, ಹೊನ್ನೇನಹಳ್ಳಿ ಕೋಲಾರ ತಾಲೂಕು ಎಂದು ಮುದ್ರಿಸಲಾಗಿದೆ.
ಚಿಲ್ಲರೆ ಅಂಗಡಿಯಲ್ಲಿ ಮಾರಾಟವಾಗುತ್ತಿರುವ ಜಾಲದ ಹಿಂದೆ ಯಾರಿದ್ದಾರೆ ಎಂಬುದು ಬಹಿರಂಗವಾಗಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ. ಆಹಾರ ಪೊಟ್ಟಣಗಳನ್ನು ವಶಕ್ಕೆ ಪಡೆದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಾದ ನಾಗರತ್ನಮ್ಮ ಮತ್ತು ವಿನೋದಾ ಅವರು ನೀಡಿದ ದೂರಿನ ಆಧಾರದ ಮೇಲೆ ಅಕ್ರಮ ದಾಸ್ತಾನು ಮತ್ತು ಮಾರಾಟ ಮಾಡುತ್ತಿದ್ದ ಲ್ಮನಾರಾಯಣ ಶೆಟ್ಟಿ ಮತ್ತು ಮನೆ ಮಾಲೀಕರ ಮೇಲೆ ದೂರು ದಾಖಲಿಸಲಾಗಿದೆ. ಆರೋಪಿ ಪರಾರಿಯಾಗಿದ್ದಾನೆ.
ಆಯಾ ತಾಲೂಕಿನಲ್ಲಿ ತಯಾರು ಮಾಡುವ ಆಹಾರ ಪಾಕೆಟ್ಗಳನ್ನು ಅದೇ ತಾಲೂಕಿನಲ್ಲೆ ವಿತರಣೆ ಮಾಡಲಾಗುತ್ತದೆ. ಬೇತಮಂಗಲದಲ್ಲಿ ಸಿಕ್ಕಿರುವ ಪ್ಯಾಕೇಟ್ ಗಳು ಕೋಲಾರ ತಾಲೂಕಿಗೆ ಸೇರಿದ್ದಾಗಿದೆ. ಈ ಬಗ್ಗೆ ವಿಚಾರಣೆ ಮಾಡಲಾಗುತ್ತಿದೆ. ಸಾಮಾನ್ಯವಾಗಿ ಇಲಾಖೆ ಅಧಿಕಾರಿಗಳು ಅಥವಾ ಅಂಗನವಾಡಿ ಶಿಕರೂ ಈ ರೀತಿ ಮಾಡಲು ಸಾಧ್ಯವಿಲ್ಲ. ಮಕ್ಕಳಿಗೆ ನೀಡುವ ಆಹಾರ ಪೊಟ್ಟಣಗಳು ಪಾಲಕರು ಸರಿಯಾದ ರೀತಿಯಲ್ಲಿ ಉಪಯೋಗಿಸುತ್ತಿಲ್ಲ ಅನಿಸುತ್ತದೆ. ಪಾಕೆಟ್ ಬೆಲೆ ಕನಿಷ್ಠ 150 ರೂಪಾಯಿ ಆಗುತ್ತದೆ. ಆದ್ದರಿಂದ ವಿತರಣೆ ಮಾಡುವಾಗ ಎಲ್ಲ ರೀತಿಯಲ್ಲೂ ಮಾಹಿತಿ ನೀಡಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತೇವೆ. ಆದರೂ ಕೆಲವರು ಮಕ್ಕಳಿಗೆ ನೀಡದೆ ರ್ನಿಲಕ್ಷ$್ಯ ವಹಿಸುತ್ತಾರೆ. ಪಾಲಕರ ಕಡೆಯಿಂದ ಅಂಗಡಿಯವರು ಖರೀದಿ ಮಾಡಿರುವ ಸಾಧ್ಯತೆ ಇದೆ. ಈ ಬಗ್ಗೆ ಸಮಗ್ರ ತನಿಖೆ ಕೈಗೊಳ್ಳಲಾಗುತ್ತದೆ. ಮುದ್ದಣ್ಣ, ಜಿಲ್ಲಾ ಉಪನಿರ್ದೇಶಕ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ
ಖಚಿತ ಮಾಹಿತಿ ಮೇರೆಗೆ ಸ್ಥಳ ಪರಿಶೀಲಿಸಿದಾಗ ಅಕ್ರಮ ದಾಸ್ತಾನು ಮಾಡಿರುವುದು ಕಂಡು ಬಂದಿದೆ. ಈ ಬಗ್ಗೆ ಮನೆ ಮತ್ತು ಅಂಗಡಿ ಮಾಲೀಕರ ಮೇಲೆ ಪೊಲೀಸರಿಗೆ ದೂರು ನೀಡಲಾಗಿದ್ದು, ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ನಾಗರತ್ನಮ್ಮ, ಸಿಡಿಪಿಒ ಕೆಜಿಎಫ್