ಜಿಲ್ಲೆ

ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸ್ವಚ್ಛತಾ ವಾಹಿನಿ ಸಿಬ್ಬಂದಿ ಪ್ರತಿಭಟನೆ

ಚಿತ್ರದುರ್ಗ: ಗ್ರಾಪಂ ಸ್ವಚ್ಛತಾ ವಾಹಿನಿ ಮಹಿಳಾ ಆಟೋ ಚಾಲಕರು ಹಾಗೂ ಸಹಾಯಕರ ಜಿಲ್ಲಾ ಸಂಘದ ನೇತೃತ್ವದಲ್ಲಿ ನಾನಾ ಬೇಡಿಕೆಗಳ ಈಡೇ ರಿಕೆಗೆ ಆಗ್ರಹಿಸಿ ಜಿಪಂ ಕಚೇರಿ ಬಳಿ ಸ್ವಚ್ಛತಾ ವಾಹಿನಿ ಮಹಿಳಾ ಸಿಬ್ಬಂದಿ ಬುಧವಾರ ಧರಣಿ ನಡೆಸಿದರು.
ತಮ್ಮನ್ನು ಗ್ರಾಪಂ ನೌಕರರೆಂದು ಪರಿಗಣಿಸಬೇಕು. ಬಾಕಿ ವೇತನ ಪಾವತಿ,ತರಬೇತಿ ಪಡೆದ ಎಲ್ಲರಿಗೂ ನೌಕರಿ ಹಾಗೂ ಆಟೋ ನೀಡ ಬೇಕು. ಗ್ರಾಪಂಗಳಲ್ಲಿ ಹಾಜರಾತಿ ನಿರ್ವಹಿಸ ಬೇಕು. ಗುರುತಿನ ಚೀಟಿ ವಿತರಿಸುವುದರೊಂದಿಗೆ ವರ್ಷ ಪೂರ್ಣ ಪ್ರತಿ ತಿಂಗಳು ವೇತನ ಪಾವತಿಸಬೇಕು. ಪ್ರತಿ ತಿಂಗಳು ಉಚಿತ ಆರೋಗ್ಯ ತಪಾಸಣೆಯಾಗಬೇಕು. ಕೆಲಸ ಮಾಡುವವರಿಗೆ ಕಡ್ಡಾಯವಾಗಿ ಗ್ಲೌಸ್ ಮತ್ತು ಮಾಸ್ಕ್ ನೀ ಡಬೇಕು. ಶಾಸನಬದ್ಧ ಅನುದಾನದಲ್ಲೇ ವರ್ಷ ಪೂರ್ತಿ ವೇತನ ನೀಡಲು ಕೇಂದ್ರ,ರಾಜ್ಯಸರ್ಕಾರಗಳು ಆದೇಶಿಸಬೇಕೆಂದು ಆಗ್ರಹಿಸಿ ದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಗ್ರಾಪಂ ನೌಕರರ ಸಂಘದ ಜಿಲ್ಲಾಧ್ಯಕ್ಷ ಡಿ.ಎಂ.ಮಲಿಯಪ್ಪ ಮಾತನಾಡಿ,ಅನೇಕ ಬಾರಿ ಪ್ರತಿಭಟನೆ ನಡೆ ಸಿದರೂ ಯಾವುದೇ ಪ್ರಯೋಜನವಾಗಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲೆಯ ಇಒಗಳು,ಪಿಡಿಒಗಳ ಸಭೆ ನಡೆಸಿ ಎಲ್ಲರಿಗೂ ವೇತನ ನೀಡುವುದು ಸೇರಿದಂತೆ ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದರು.
ಬೇಡಿಕೆಗಳನ್ನು ಪರಿಶೀಲಿಸಿ 15ದಿನದೊಳಗೆ ಈಡೇರಿಸುವುದಾಗಿ ಜಿಪಂ ಸಿಇಒ ಎಸ್.ಜೆ. ಸೋಮಶೇಖರ್ ಅವರ ಭರವಸೆಯಂತೆ ಜಿಪಂ ಬಳಿ ಬುಧವಾರದಿಂದ ನಡೆಸಲು ಉದ್ದೇಶಿಸಿದ್ದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಹಿಂಪಡೆದರು. ವೈ.ಜಯಲಕ್ಷ್ಮೀ,ಎನ್.ನಿಂಗ ಮ್ಮ,ಸಂಗೀತಾ,ರೇಖಾ,ತನುಜಾ,ಆಶಾ,ಅಕ್ಷತಾ, ಆಶಾರಾಣಿ,ಸುನಿತಾ ಮತ್ತಿತರರು ಪ್ರತಿಭಟನೆಯಲ್ಲಿದ್ದರು.