ಜಿಲ್ಲೆ

ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕರ ಪ್ರತಿಭಟನೆ

ಚಿತ್ರದುರ್ಗ: ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಧನ ಸಹಾಯ ವಿತರಣೆ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯಕಟ್ಟಡ ಮತ್ತು ಇ ತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಕಾರ್ಮಿಕರು ಡಿಸಿ ಕಚೇರಿ ಬಳಿ ಮಂಗಳವಾರ ಪ್ರತಿಭಟನೆ ನಡೆಸಿ ದರು.
ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಕಾನೂನು ಬದ್ಧವಾಗಿ ಒದಗಿಸಲಾಗುತ್ತಿದ್ದ ಹಲವು ಸೌಲಭ್ಯಗಳನ್ನು ಸ್ಥಗಿತಗೊಳಿಸಲಾಗಿದೆ. ಶೈಕ್ಷಣಿಕ ಧನ ಸಹಾಯ,ಮದುವೆ ಸಹಾಯಧನ ಸ್ಥಗಿತ, ವೈದ್ಯಕೀಯ ಪರಿಹಾರಕ್ಕೆಂದು ಸಲ್ಲಿಕೆಯಾಗಿರುವ ಸಾವಿರಾರು ಅರ್ಜಿಗಳು ಇತ್ಯರ್ಥವಾ ಗಿಲ್ಲ ಹಾಗೂ ಪಿಂಚಣಿ ಸ್ಥಗಿತದಿಂದಾಗಿ ಕಾರ್ಮಿಕರ ಕುಟುಂಬಗಳು ಸಂಕಷ್ಟಕ್ಕೆ ಒಳಗಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾನಿ ರತರು,ಲ್ಯಾಪ್‌ಟಾಪ್‌ಖರೀದಿ,ವೈದ್ಯಕೀಯ ತಪಾಸಣೆ,ಪೌಷ್ಠಿಕಾಂಶವುಳ್ಳ ಆಹಾರದ ಕಿಟ್‌ಗಳಲ್ಲಿ ಕಾರ್ಮಿಕರ ಕಲ್ಯಾಣ ಮಂಡಳಿ ಕೋಟ್ಯಂ ತರ ರೂ.ಅಕ್ರಮ ಎಸಗಿದೆ ಎಂದು ಆರೋಪಿಸಿದರು.
ಶೈಕ್ಷಣಿಕ ಧನ ಸಹಾಯ ಅರ್ಜಿ ಸಲ್ಲಿಕೆ ಅವಧಿಯನ್ನು 2024 ಆಗಸ್ಟ್ 31ರವರೆಗೆ ವಿಸ್ತರಿಸ ಬೇಕು. ನೈಜ ಕಾರ್ಮಿಕರ ಅರ್ಜಿಯಲ್ಲಿ ತ ಪ್ಪುಗಳಿದ್ದರೂ ಅರ್ಜಿ ಪುರಸ್ಕರಿಸಿ ಕಾಲಮಿತಿಯೊಳಗೆ ವಿಲೇವಾರಿ ಮಾಡುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ದರು.
ಸಿಐಟಿಯು ಜಿಲ್ಲಾ ಸಹ ಸಂಚಾಲಕ ಸಿ.ಕೆ.ಗೌಸ್‌ಪೀರ್,ಬಿ.ಸಿ.ನಾಗರಾಜಚಾರಿ,ಮಂಜುನಾಥ್,ಅಬ್ದುಲ್ಲಾ,ಸಣ್ಣಮ್ಮ,ರಾಘವೇಂದ್ರ,ರ ಶೀದ್,ಇಸ್ಮಾಯಿಲ್‌ಸಾಬ್,ದ್ರಾಕ್ಷಾಯಣಮ್ಮ,ಸೈಯದ್‌ಮುಜ್ಜು,ಮಲ್ಲಿಕಾರ್ಜುನ್,ಚಂದ್ರಮ್ಮ,ಉಮೇಶ್,ಕೆ.ಎನ್.ನಾಗರಾಜ್ ಮತ್ತಿತರ ರು ಇದ್ದರು.