ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಗ್ರಾಮ ಆಡಳಿತಾಧಿಕಾರಿಗಳ ಸಂಘದ ಬಸವಕಲ್ಯಾಣ ತಾಲೂಕು ಘಟಕದಿಂದ ಮಿನಿ ವಿಧಾನಸೌಧ ಬಳಿ ಗುರುವಾರ ಪ್ರತಿಭಟನೆ ನಡೆಇಸ ಕಂದಾಯ ಸಚಿವರಿಗೆ ಬರದ ಮನವಿಪತ್ರವನ್ನು ಸಹಾಯಕ ಆಯುಕ್ತ ಮುಕುಲ್ ಜೈನ್ ಅವರಿಗೆ ಸಲ್ಲಿಸಲಾಯಿತು. ತಾಲೂಕು ಅಧ್ಯಕ್ಷ ಕಾಶಿನಾಥ ಚಂಡಕಾಪುರೆ, ಸುಧಾಕರ ಗೌರಶೆಟ್ಟಿ, ದುಶಾಂತ ರಡ್ಡಿ, ದಿಲೀಪ ದೋಮೆ, ಬಸವರಾಜ, ಕೆಂಚೆಪ್ಪ, ಪ್ರಭು, ಶಿವರಾಜ, ಸರೂಬಾಯಿ, ಪ್ರಭಾವತಿ ಇತರರಿದ್ದರು. 
ಜಿಲ್ಲೆ

ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ

ಬಸವಕಲ್ಯಾಣ: ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ತಾಲೂಕು ಘಟಕದಿಂದ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಮಿನಿ ವಿಧಾನಸೌಧದ ಬಳಿ ಗುರುವಾರ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿ ಪ್ರತಿಭಟನೆ ನಡೆಸಿದರು.

ಕಂದಾಯ ಸಚಿವರಿಗೆ ಬರೆದ ಮನವಿ ಪತ್ರವನ್ನು ಸಹಾಯಕ ಆಯುಕ್ತ ಮುಕುಲ್ ಜೈನ್ ಹಾಗೂ ತಹಸೀಲ್ದಾರ್ ಡಾ.ದತ್ತಾತ್ರೇಯ ಗಾದಾ ಅವರಿಗೆ ಸಲ್ಲಿಸಿ, ಮೊಬೈಲ್ ವೆಬ್ ತಂತ್ರಾAಶಗಳ ಮೂಲಕ ಕರ್ತವ್ಯ ನಿರ್ವಹಿಸುತ್ತಿರುವುದರಿಂದ ಹಾಗೂ ಸಿ ವೃಂದದ ನೌಕರರಿಗೆ ಎಲ್ಲರಂತೆ ವೇತನ ಶ್ರೇಣಿ ನೀಡಬೇಕು, ಸುಸಜ್ಜಿತ ಕಚೇರಿ ನಿರ್ಮಿಸಬೇಕು, ಅಂತರ ಜಿಲ್ಲಾ ವರ್ಗಾವಣೆಗೆ ಕ್ರಮಕೈಗೊಳ್ಳಬೇಕು, ಗ್ರಾಮ ಆಡಳಿತ ಅಧಿಕಾರಿಗಳಿಗೆ (ರಿಸ್ಕ್ ಭತ್ಯೆ) ರ‍್ಯಾಂಕಿAಗ್ ವ್ಯವಸ್ಥೆ ರದ್ದು ಪಡಿಸಬೇಕು, ಅನ್ಯ ಇಲಾಖೆಯ ಕೆಲಸಗಳು ನಿರ್ವಹಿಸದಂತೆ ಸೂಕ್ತ ನಿರ್ದೇಶನ ನೀಡಬೇಕು ಎಂಬ ವಿವಿಧ ಬೇಡಿಕೆ ಈಡೇರಿಸಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸಂಘದ ತಾಲೂಕು ಅಧ್ಯಕ್ಷ ಕಾಶಿನಾಥ ಚಂಡಕಾಪುರೆ, ಪ್ರಧಾನ ಕಾರ್ಯದರ್ಶಿ ಸುಧಾಕರ ಗೌರಶೆಟ್ಟಿ, ಉಪಾಧ್ಯಕ್ಷ ದುಶಾಂತ ರಡ್ಡಿ, ಪ್ರಮುಖರಾದ ದಿಲೀಪ ದೋಮೆ, ಬಸವರಾಜ, ಕೆಂಚೆಪ್ಪ, ಪ್ರಭು, ಶಿವರಾಜ, ಸರೂಬಾಯಿ, ಪ್ರಭಾವತಿ, ಶಾರದಾ, ಅನುರಾಧಾ, ಕೃತಿಕಾ, ಆಶಾರಾಣಿ ಇತರರಿದ್ದರು.