ಜಿಲ್ಲೆ

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನೋಂದಾಯಿತ ಗೃಹ ಕಾರ್ಮಿಕರ ಪ್ರತಿಟನೆ

ಹಾಸನ: ರಾಜ್ಯದಲ್ಲಿ ಮನೆ ಕೆಲಸ ಮಾಡಿಕೊಂಡು ಬದುಕು ಕಟ್ಟಿಕೊಳ್ಳುತ್ತಿರುವ ನೋಂದಾಯಿತ ಗೃಹ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ಮತ್ತು ನೋಂದಾಯಿತ ಗೃಹ ಕಾರ್ಮಿಕರಿಗೆ 5 ಲಕ್ಷ ರೂ. ಅಪಘಾತ ವಿಮೆ ನೀಡುವಂತೆ ಆಗ್ರಹಿಸಿ ರಾಜ್ಯ ಅಸಂಘಟಿತ ಕಾರ್ಮಿಕ ಸಂಘದಿಂದ ಪ್ರತಿಟನೆ ನಡೆಸಿದರು.
ನೂರಾರು ಜನ ನೋಂದಾಯಿತ ಗೃಹ ಕಾರ್ಮಿಕರು ಸೋಮಾವಾರ ಮೆರವಣಿಗೆ ಮೂಲಕ ಕಾರ್ಮಿಕ ಇಲಾಖೆ ಕಚೇರಿಗೆ ಆಗಮಿಸಿ ಸರ್ಕಾರದ ವಿರದ್ಧ ಆಕ್ರೋಶ ವ್ಯಕ್ತಪಡಿಸಿ ಘೋಷಣೆ ಕೋಗಿ, ರಾಜ್ಯದಲ್ಲಿ ಮನೆ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿರುವ ಗೃಹ ಕಾರ್ಮಿಕರು ಅತ್ಯಂತ ಕಷ್ಟಕರವಾದ ಸನ್ನಿವೇಶಗಳಲ್ಲಿ ಬದುಕು ನಡೆಸುತ್ತಿದ್ದಾರೆ. ಈ ಕಾರ್ಮಿಕರಿಗೆ ಸರ್ಕಾರದ ಯಾವುದೇ ಮೂಲಭೂತ ಸೌಕರ್ಯಗಳು ಇಲ್ಲದಿರುವುದು ಹಾಗೂ ಸರ್ಕಾರ ಇವರನ್ನು ಮುಖ್ಯ ವಾಹಿನಿಗೆ ಸೇರಿಸದಿರುವುದು ಖಂಡನೀಯ. ಅಸಂಘಟಿತ ಕಾರ್ಮಿಕರ 11 ವಲಯಗಳಲ್ಲಿ ಗೃಹ ಕಾರ್ಮಿಕರಿಗೆ ಇಲ್ಲಿಯತನಕ ಯಾವುದೇ ಮೂಲಭೂತ ಸೌಕರ್ಯಗಳನ್ನು ನೀಡದೇ ಆ ಗೃಹ ಕಾರ್ಮಿಕರನ್ನು ಕಡೆಗಣಿಸಿರುವುದನ್ನು ರಾಜ್ಯ ಅಸಂಘಟಿತ ಕಾರ್ಮಿಕರ ಸಂಘ ಖಂಡಿಸುತ್ತದೆ ಎಂದರು.
ರಾಜ್ಯ ಸರ್ಕಾರವು ಮನೆಕೆಲಸ ಮಾಡುವ ಗೃಹ ಕಾರ್ಮಿಕರ ಗಣತಿ ಕಾರ್ಯ ನಡೆಯಬೇಕು. ಅಲ್ಲಿಯವರೆಗೆ ಈಗ ನೋಂದಾಯಿತ ಗೃಹ ಕಾರ್ಮಿಕರ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ವಿದ್ಯಾರ್ಥಿ ವೇತನ ಮತ್ತು ಅಪಘಾತ ವಿಮೆ ಸೌಲಭ್ಯವನ್ನು ಹಾಗೂ ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ, ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುವ ಮನೆಗೆಲಸದ ನೋಂದಾಯಿತ ಅಸಂಘಟಿತ ಕಾರ್ಮಿಕರಿಗೆ ನಿವೇಶನಗಳನ್ನು ಹಂಚುವಾಗ ಪ್ರತ್ಯೇಕವಾಗಿ ಇವರನ್ನು ಪರಿಗಣಿಸಿ ನಿವೇಶನ ಅಥವಾ ಮನೆಗಳನ್ನು ನೀಡುವಂತೆ ಸರ್ಕಾರವನ್ನು ಸಂಘವು ಒತ್ತಾಯಿಸುತ್ತದೆ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ರಾಜ್ಯ ಅಸಂಘಟಿತ ಕಾರ್ಮಿಕ ಸಂಘದ ಸಂಸ್ಥಾಪಕ ಗೌರವಾಧ್ಯಕ್ಷ ಕುಪೇಂದ್ರ ಆಯನೂರು,ರಾಜ್ಯಾಧ್ಯಕ್ಷ ಪ್ರದೀಪ್ ಹೊನ್ನಪ್ಪ, ರಾಜ್ಯ ಉಪಾಧ್ಯಕ್ಷ ಮಹೇಶ್ ಫೇಟ್ಕರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಮೇಘನ ಮೋಹನ್, ಜಿಲ್ಲಾದ್ಯಕ್ಷ ಎಸ್,ಎಸ್,ರಂಗಸ್ವಾಮಿ, ಉಪಾಧ್ಯಕ್ಷ ಜ್ಞಾನೇಶ್ವರ್, ಸಗೀರ್ ಅಹಮದ್, ನಗರಾಧ್ಯಕ್ಷ ಮಹೇಶ್, ಮಹಿಳಾ ಸಂಘಟನೆಯ ರೇಣುಕಾ. ಯಶೋಧ ಇತರರು ಇದ್ದರು.