*ಕಾಮಗಾರಿಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರಿಂದ ಗುದ್ದಲಿಪೂಜೆ.
ಚಾಮರಾಜನಗರ: ತಾಲೂಕಿನ ಅರಣ್ಯದಂಚಿನ ಗ್ರಾಮ ಬೇಡಗುಳಿಯಲ್ಲಿ ಮಾರಿಗುಡಿಪೋಡು, ಬಿಸಿಲುಗೆರೆ, ಕಾಡಿಗೆರೆ, ರಾಮಯ್ಯನಪೋಡು, ಮೊಣಕೈಪೋಡು, ಬೇಡಗುಳಿ ಹಾಡಿಗಳಿಗೆ ವಿದ್ಯುತ್‌ಸೌಲಭ್ಯ ಕಲ್ಪಿಸುವ 9ಕೋಟಿ ರೂ.ವೆಚ್ಚದ ನಿರಂತರ ವಿದ್ಯುತ್ ಸೌಲಭ್ಯ ಕಲ್ಪಿಸುವ ಕಾಮಗಾರಿಗೆ ಎಂಎಸ್‌ಐಎಲ್ ಅಧ್ಯಕ್ಷ, ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಗುದ್ದಲಿಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಅವರು ಮಾತನಾಡಿ, ಸ್ವಾತಂತ್ರ ಪೂರ್ವದಿಂದಲೂ ಗಿರಿಜನರು ವಾಸಿಸುವ ಪೋಡುಗಳಲ್ಲಿ ವಿದ್ಯುತ್ ಸೌಲಭ್ಯವಿರಲಿಲ್ಲ, ಇದೀಗ ಇಂಧನ ಇಲಾಖೆಯಿಂದ ಗಿರಿಜನರಿಗೆ ವಿದ್ಯುತ್ ಸೌಲಭ್ಯ ಕಲ್ಪಿಸಲು ಮುಂದಾಗಿರುವುದು ಹೆಮ್ಮೆಯ ಸಂಗತಿ. ಬರುವ ಮೂರುತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸಿ,ನಿರಂತರ ವಿದ್ಯುತ್ ಪೂರೈಕೆಮಾಡಲಾಗುವುದು ಎಂದರು.
ಗಿರಿಜನರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣಕೊಡಿಸಬೇಕು, ದುಶ್ಚಟಗಳಿಗೆ ಯಾರೂ ದಾಸರಾಗಬಾರದು, ಪ್ರತಿಯೊಬ್ಬರು ಶಿಕ್ಷಣಪಡೆದಾಗ ಸರ್ಕಾರಿಸೌಲಭ್ಯ ಪಡೆಯುವ ಅವಕಾಶಗಳಿವೆ ಎಂದರು. ಇದೇವೇಳೆ ಹಾಡಿಗಳ ನಿವಾಸಿಗಳಿಗೆ ಮುಂದಿನದಿನಗಳಲ್ಲಿ 300 ಮನೆ ನಿರ್ಮಿಸಿಕೊಡಲು ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.
ಗ್ರಾಪಂ ಉಪಾಧ್ಯಕ್ಷ ರಾಚಪ್ಪ, ತಾಪಂ ಮಾಜಿಸದಸ್ಯ ಕುಮಾರನಾಯಕ್, ಮಾಜಿಅಧ್ಯಕ್ಷ ಶಾಮಿರ್ ಪಾಷಾ, ಶಿವನಾಯಕ, ಜಡೆಯಪ್ಪ, ಉಲ್ಲೇಶ್ ನಾಯಕ, ಮಹದೇವು, ಶಿವಣ್ಣ, ತಾಲ್ಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಸುಬ್ರಾಯ್, ಸೆಸ್ಕ್ ಇಇ ಪ್ರದೀಪ್, ಎಇಇ ಪ್ರಕಾಶ್, ಜೆಇ ಮಹದೇವಸ್ವಾಮಿ, ಲೆಕ್ಕಾಧಿಕಾರಿಭಾಸ್ಕರ್, ಲೆಕ್ಕಪರಿಶೋಧಕ ಮಹೇಶ್,ಸೇರಿದಂತೆ ಇತರರು ಹಾಜರಿದ್ದರು.