ಜಿಲ್ಲೆ

ಬೇಗ ಜಮೀನುಗಳಿಗೆ ಬೆಲೆ ನಿಗದಿ ಮಾಡಿ

ಸಂತೋಷ ದೇಶಪಾಂಡೆ

ಬಾಗಲಕೋಟೆ: ಯುಕೆಪಿದಡಿ ಜಮೀನು ಕಳೆದುಕೊಳ್ಳುತ್ತಿರುವ ನೀರಾವರಿ ಜಮೀನಿಗೆ ೫೦ ಲಕ್ಷ ರು. ಹಾಗೂ ಖುಷ್ಕಿ ಜಮೀನುಗಳಿಗೆ ೪೦ ಲಕ್ಷ ರೂ.ನೀಡುವಂತೆ ಸಂತ್ರಸ್ತ ಸಮಿತಿಯಿಂದ ಸರ್ಕಾರದ ಮೇಲೆ ಒತ್ತಡ ಹೇರಲಾಗಿದೆ. ಸರ್ಕಾರ ಮುಂದಿನ ಎರಡು ಸಚಿವ ಸಂಪುಟಗಳಲ್ಲೇ ಇದರ ಬಗ್ಗೆ ತೀರ್ಮಾನ ತಿಳಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ಹೇಳಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಆದಷ್ಟು ಕೂಡಲೇ ಮುಳುಗಡೆಯಾಗುವ ಜಮೀನುಗಳಿಗೆ ಬೆಲೆ ನಿರ್ಣಯ ಮಾಡಿ, ಘೋಷಿಸುವಂತೆ ಅವಳಿ ಜಿಲ್ಲೆಯ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದರು.

ಮಂಡ್ಯದಲ್ಲಿ ನಡೆಯುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಗೋರೂರು ಚನ್ನಬಸಪ್ಪ ಅವರು ಹೇಳಿದಂತೆ ಪ್ರತಿ ಮೂರು ವರ್ಷಗಳಿಗೊಮ್ಮೆ ಮಹಿಳೆಯರನ್ನು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಲು ಬೈಲಾದಲ್ಲಿ ತಿದ್ದುಪಡಿ ತರಬೇಕು ಎಂದರು.

ಮುಖಂಡರಾದ ನಾಗರಾಜ ಹದ್ಲಿ, ಸಿಕಂದರ್ ಅಥಣಿ, ರಾಜು ಮನ್ನಿಕೇರಿ, ಚಂದ್ರಶೇಖರ ರಾಠೋಡ ಇದ್ದರು.